ಲಡಾಖ್: ಲಡಾಖ್‌ನ ಪುಟ್ಟ ಪೋರನೊಬ್ಬ ಹೈ ಜೋಶ್ ನಲ್ಲಿ ಯೋಧರಿಗೆ ಸೆಲ್ಯೂಟ್ ಹೊಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಾಲಕ ನೆಟ್ಟಿಗರ ಮನ ಗೆದ್ದಿದ್ದಾನೆ.
ಬಾಲಕ ಸೆಲ್ಯೂಟ್ ಹೊಡೆಯುತ್ತಿರುವುನ್ನು ಸೈನಿಕರೊಬ್ಬರು ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ವಿಡಿಯೋವನ್ನು ಐಟಿಬಿಪಿ ಟ್ವೀಟ್ ಮಾಡಿದ್ದು, 'ಸೆಲ್ಯೂಟ್! ಲಡಾಖ್‌ನ ಚುಶುಲ್‌ನಲ್ಲಿರುವ ಸ್ಥಳೀಯ ಪುಟ್ಟ ಕಂದಮ್ಮ ನಮಗ್ಯಾಲ್ ಅವರ ಮುಂದೆ ಹೋಗುತ್ತಿರುವ ಸೈನಿಕರಿಗೆ ಸೆಲ್ಯೂಟ್ ಹೊಡೆಯುತ್ತಾನೆ. ಅತ್ಯಂತ ಉತ್ಸಾಹಭರಿತವಾಗಿ ಹೆಚ್ಚಿನ ಜೋಶ್ ನೊಂದಿಗೆ ಸೆಲ್ಯೂಟ್ ಹೊಡೆಯುತ್ತಿರುವುದನ್ನು ಅಕ್ಟೋಬರ್ 8ರಂದು ಐಟಿಬಿಪಿ ಅಧಿಕಾರಿಯೊಬ್ಬರು ಸೆರೆಹಿಡಿದ್ದಾರೆ'' ಎಂದು ಬರೆಯಲಾಗಿದೆ. ಬಾಲಕನ ವಿಡಿಯೋಗೆ ಸಾವಿರಾರು ನೆಟ್ಟಿಗರು ಲೈಕ್ ಮಾಡಿದರೆ, ಅನೇಕರು ತಮ್ಮದೆ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
PublicNext
12/10/2020 05:43 pm