ಧಾರವಾಡ : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಎಪಿಎಂಸಿ ಹಾಗೂ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿರೋಧಿಸಿ ಇಂದು ಕೆಲ ಕಾರ್ಮಿಕ ಹಾಗೂ ರೈತ ಸಂಘಟನೆಗಳು ಭಾರತ ಬಂದ್ ನಡೆಸುತ್ತಿದ್ದು, ಇದನ್ನು ವಿರೋಧಿಸಿ ವಾಟ್ಸಪ್‌ನಲ್ಲಿ ವಿಭಿನ್ನವಾದ ವೀಡಿಯೋ ಒಂದು ಹರಿದಾಡುತ್ತಿದೆ.
ಈ ವೀಡಿಯೋ ಯಾವ ಊರಿನದು ಎಂಬುದು ಗೊತ್ತಾಗಿಲ್ಲ. ಆದರೆ, ಉತ್ತರ ಕರ್ನಾಟಕ ಭಾಗದವರೇ ಈ ವೀಡಿಯೋ ಮಾಡಿರುವುದು ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ.
ಎಪಿಎಂಸಿ ಕಾಯ್ದೆಗಳನ್ನು ಏಕೆ ಬೆಂಬಲಿಸಬೇಕು?, ಪ್ರಧಾನಿ ನರೇಂದ್ರ ಮೋದಿ ರೈತರಿಗೆ ಯಾವ ರೀತಿ ಅನುಕೂಲ ಮಾಡಿಕೊಟ್ಟಿದ್ದಾರೆ ಎಂಬೆಲ್ಲ ಅಂಶಗಳನ್ನು ಈ ವೀಡಿಯೋ ಮೂಲಕ ಹೇಳಲಾಗಿದೆ. ಇದೀಗ ಈ ವೀಡಿಯೋ ಸಖತ್ ವೈರಲ್ ಆಗಿದೆ.
Kshetra Samachara
27/09/2021 09:14 am