ಧಾರವಾಡ: ಉತ್ತರ ಕನ್ನಡ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ (ರಿ.) ಹಾಗೂ ಕಾರ್ಮಿಕ ಇಲಾಖೆ, ಕರ್ನಾಟಕ ಸರ್ಕಾರದ ಸಮನ್ವಯದಲ್ಲಿ ಕಾರವಾರದಿಂದ ಬೆಂಗಳೂರಿಗೆ ಸ್ಕೇಟಿಂಗ್ Rally ಯನ್ನು ಮೇ 6 ರಿಂದ ಮೇ 12, 2022 ರವರೆಗೆ ನಡೆಸುತ್ತಿದೆ.
Rally ಥೀಮ್- ಕಾರ್ಮಿಕ ಇಲಾಖೆಯ ಅವಶ್ಯಕತೆ, ರಸ್ತೆ, ಸುರಕ್ಷತೆ, ಸ್ವಚ್ಛ ಭಾರತ ಹಾಗೂ ಹೆಣ್ಣು ಮಗುವಿನ ರಕ್ಷಣೆ ಆಗಿದ್ದು,
ಈ ಸ್ಕೇಟಿಂಗ್ Rallyಯಲ್ಲಿ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ರೋಲರ್ ಸ್ಕೇಟಿಂಗ್ ಅಕಾಡೆಮಿಯ 3 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ಅವರ ಹೆಸರುಗಳು
1) ತ್ರಿಶಾ ಪಿ.ಜಡಾಲ
2) ಓಜಲ್ ಎಸ್ ನಲವಡಿ
3) ಸಂಕೇತ್ ಪಿ. ಕಡ್ಡಿ
ಈ Rallyಯಲ್ಲಿ ಭಾಗವಹಿಸಲು ನಮ್ಮ ಜಿಲ್ಲಾ ಸ್ಕೇಟರ್‌ಗಳಿಗೆ ಇದು ಉತ್ತಮ ಅವಕಾಶ ಮತ್ತು ಗೌರವವಾಗಿದೆ.
ಹುಬ್ಬಳ್ಳಿ ರೋಲರ್ ಸ್ಕೇಟಿಂಗ್ ಅಕಾಡೆಮಿ ಸದಸ್ಯರು, ಪೋಷಕರು ಮತ್ತು ಧಾರವಾಡ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಹೆಮ್ಮೆ ಪಡುತ್ತಿದ್ದಾರೆ ಮತ್ತು ಮಕ್ಕಳ ಸಾಧನೆಗೆ ತಮ್ಮ ಆಶೀರ್ವಾದ ಮತ್ತು ಪ್ರೋತ್ಸಾಹವನ್ನು ವ್ಯಕ್ತಪಡಿಸಿದ್ದಾರೆ.
Kshetra Samachara
05/05/2022 10:27 pm