ಧಾರವಾಡ: ಐಟಿಐ ಹಾಗೂ ಇತರ ಕೈಗಾರಿಕಾ ತರಬೇತಿ ಪಡೆದ ಅಭ್ಯರ್ಥಿಗಳು ತಮ್ಮ ಅರ್ಹತೆಗೆ ಪೂರಕವಾಗಿ ಕೌಶಲ್ಯ ಗಳಿಸಿಕೊಂಡು ದೇಶ, ವಿದೇಶಗಳ ಉದ್ಯಮಗಳಲ್ಲಿ ಉತ್ತಮ ಉದ್ಯೋಗ ಪಡೆಯಲು ಪ್ರಯತ್ನಶೀಲರಾಗಬೇಕು. ಉದ್ಯಮಶೀಲತೆ ಅಳವಡಿಸಿಕೊಂಡು ಸ್ವಯಂ ಉದ್ಯೋಗಿಗಳಾಗಲು ಅಪಾರ ಅವಕಾಶಗಳಿವೆ ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಹೇಳಿದ್ದಾರೆ.
ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯು ಅವ್ವಪ್ಪಣ್ಣ ಅತ್ತಿಗೇರಿ ಐಟಿಐ ಸಹಯೋಗದಲ್ಲಿ ಧಾರವಾಡದಲ್ಲಿ ಜಿಲ್ಲಾ ಮಟ್ಟದ ರಾಷ್ಟ್ರೀಯ ಶಿಶಿಕ್ಷ ಮೇಳವನ್ನು ಅಪಾರ ಡಿಸಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಉದ್ಯೋಗ ಮೇಳಗಳ ಮೂಲಕ ಅರ್ಹ ಅಭ್ಯರ್ಥಿಗಳಿಗೆ ಸ್ಥಳೀಯವಾಗಿ ಉದ್ಯೋಗ ಒದಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಯುವಶಕ್ತಿ ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ತಡೆಯಲು ಮೇಳಗಳು ಸಹಕಾರಿ ಆಗಲಿದೆ. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೌಶಲ್ಯಾಧಾರಿತ ಶಿಕ್ಷಣ,ತರಬೇತಿ ನೀಡಲು ಆದ್ಯತೆ ನೀಡಿ ಪೂರಕ ವಾತಾವರಣ ನಿರ್ಮಿಸುತ್ತಿವೆ ಎಂದು ಹೇಳಿದರು.
Kshetra Samachara
21/04/2022 02:20 pm