ಹುಬ್ಬಳ್ಳಿ: ಅಭಿಮಾನಿಗಳ ಆರಾಧ್ಯ ದೈವ ಪುನೀತ್ ರಾಜಕುಮಾರ್ ನಮ್ಮನ್ನು ಅಗಲಿ ಹತ್ತು ತಿಂಗಳು ಕಳೆದಿದೆ. ಆದರೂ ಅಭಿಮಾನಿಗಳಿಗೆ ಪುನೀತ್ ರಾಜಕುಮಾರ್ ಮೇಲಿನ ಅಭಿಮಾನ ಮಾತ್ರ ಒಂದು ಚೂರೂ ಕಡಿಮೆಯಾಗಿಲ್ಲ. ಹೆಜ್ಜೆ ಹೆಜ್ಜೆಗೂ ತಮ್ಮ ಅಭಿಮಾನವನ್ನು ತೋರಿಸುತ್ತಲೇ ಬಂದಿದ್ದಾರೆ. ಈ ಬಾರಿ ಹುಬ್ಬಳ್ಳಿಯ ಅಭಿಮಾನಿಯೊಬ್ಬ ಗಣೇಶನ ಜೊತೆಗೆ ಅಪ್ಪುವನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ಅಭಿಮಾನ ಮೆರೆದಿದ್ದಾರೆ.
ನಗರದ ರಘು ಬದ್ದಿ ಎಂಬ ಯುವಕ ರಾಜ್ ಕುಟುಂಬ ಹಾಗೂ ಪುನೀತ್ ರಾಜ್ ಕುಮಾರ್ ಅವರ ಅಪ್ಪಟ್ಟ ಅಭಿಯಾನಿಯಾಗಿದ್ದಾರೆ. ರಾಜ್ ಕುಟುಂಬದ ಚಲನಚಿತ್ರ ಹಾಗೂ ಹುಟ್ಟು ಹಬ್ಬಗಳನ್ನು ಸ್ವಂತ ಖರ್ಚಿನಲ್ಲಿ ಅದ್ಧೂರಿಯಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಆದರೆ ಪುನೀತ್ ಅವರ ಮೇಲಿನ ಅಭಿಮಾನವನ್ನು ಗಣೇಶ ಹಬ್ಬದಲ್ಲಿ ವ್ಯಕ್ತಪಡಿಸುವ ಮೂಲಕ ಅಭಿಮಾನವನ್ನು ತೋರಿಸುತ್ತಿದ್ದಾರೆ.
ಇನ್ನು ಗಣೇಶ ಮೂರ್ತಿಯ ಜೊತೆಗೆ ಅಪ್ಪು ಅವರ ಮೂರ್ತಿಯನ್ನು ಪ್ರತಿಷ್ಠಾಪಿಸಿ ಗಣೇಶನಿಗೆ ಕೊಡುವ ಸ್ಥಾನಮಾನವನ್ನು ಪುನೀತ್ ಅವರಿಗೂ ನೀಡಿದ್ದಾರೆ. ಕಳೆದ ಐದು ದಿನಗಳಿಂದಲೂ ಕೂಡಾ ನಿತ್ಯ ಪೂಜೆ ಪುನಸ್ಕಾರಗಳನ್ನು ಸಲ್ಲಿಸುತ್ತಿದ್ದಾರೆ. ಇದಕ್ಕೆ ಅವರ ಕುಟುಂಬ ಹಾಗೂ ನೆರೆಹೊರೆಯ ಸ್ನೇಹಿತ ಬಂಧುಗಳು ಕೂಡಾ ಕೈಜೋಡಿಸಿದ್ದಾರೆ. ಇದಲ್ಲದೇ ನಗರದಲ್ಲಿ ಹತ್ತಾರು ಪುನೀತ್ ಅಭಿಮಾನಿಗಳು ಗಣೇಶ ಪ್ರತಿಷ್ಠಾಪನೆ ವೇಳೆ ಅಪ್ಪು ಉತ್ಸವ ನಡೆಸಿದ್ದಾರೆ.
ಒಟ್ಟಿನಲ್ಲಿ ಅಭಿಮಾನಿಯ ಅಭಿಮಾನಕ್ಕೆ ಪುನೀತ್ ಗಣೇಶನ ಸ್ಥಾನದಲ್ಲಿ ಪೂಜಿಸಲ್ಪಡುವ ಮೂಲಕ ಅಪ್ಪುವಿನಲ್ಲಿಯೇ ದೇವರು ಕಂಡಿದ್ದಾರೆ.
Kshetra Samachara
05/09/2022 05:33 pm