ಹುಬ್ಬಳ್ಳಿ: ಹಲವಾರು ಪರ ವಿರೋಧದ ನಡುವೆಯೂ ಕೂಡ ಹುಬ್ಬಳ್ಳಿಯ ರಾಣಿ ಚನ್ನಮ್ಮ ಮೈದಾನದಲ್ಲಿ ಗಣಪತಿ ಪ್ರತಿಷ್ಟಾಪನೆ ಮಾಡಿದ್ದು, ಇಂದು ಗಜಾನನ ವಿಸರ್ಜನೆ ಇರುವ ಹಿನ್ನಲೆಯಲ್ಲಿ, ಮೈದಾನದತ್ತ ಭಕ್ತ ಸಾಗರವೇ ಹರಿದು ಬಂದಿದ್ದು, ಪೊಲೀಸ್ ಬಿಗಿ ಬಂದೋಬಸ್ತ್ ಕೂಡ ಮಾಡಲಾಗಿದೆ.
ಹೌದು... ಕಳೆದ ನಾಲ್ಕೈದು ವರ್ಷಗಳಿಂದ ಗಜಾನನ ಮಂಡಳಿ ಸೇರಿದಂತೆ ಹಲವಾರು ಹಿಂದೂ ಪರ ಸಂಘಟನೆಗಳು ಮತ್ತು ಜನಪ್ರತಿನಿಧಿಗಳು ಪಾಲಿಕೆಗೆ ಮನವಿ ಮಾಡಿಕೊಂಡಿದ್ದರೂ ಆಗಿರಲಿಲ್ಲ. ಸದ್ಯ, ಈ ವರ್ಷ ಪಾಲಿಕೆ ಮತ್ತು ಹೈಕೋರ್ಟ್ ಮೂರು ದಿನಗಳ ಹುಬ್ಬಳ್ಳಿ ರಾಣಿ ಚನ್ನಮ್ಮ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶ ನೀಡಿದ್ದು, ಅತಿ ಕುತೂಹಲದಿಂದ ಆಡಳಿತ ಮಂಡಳಿ ವಿಜೃಂಭಣೆಯಿಂದ ಆಚರಣೆ ಮಾಡಿದರು.
ಇಂದು ಕೊನೆಯ ದಿನವಾದ ಹಿನ್ನಲೆಯಲ್ಲಿ, ಭಕ್ತರು ಗಣೇಶನ ವಿಸರ್ಜನೆಗೆ ತಂಡ ತಂಡೋಪ ತಂಡವಾಗಿ ಬರುತ್ತಿದ್ದಾರೆ. ವಿಸರ್ಜನೆಗೆ ಎಲ್ಲ ತಯಾರಿ ನಡೆಸಿದ್ದು, ಮಂಡಳಿ ಚನ್ನಮ್ಮ ಮಾರ್ಗವಾಗಿ ಹಳೇ ಬಸ್ ನಿಲ್ದಾಣ ಗ್ಲಾಸ್ ಹೌಸ್ ಬಳಿ ಇರುವ ಬಾವಿಯಲ್ಲಿ ವಿಸರ್ಜನೆ ಮಾಡಲಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಭದ್ರತೆ ಬಿಗಿ ಬಂದೋಬಸ್ತ್ ಮಾಡಲಾಗಿದೆ.
Kshetra Samachara
02/09/2022 01:41 pm