ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವರಮಹಾಲಕ್ಷ್ಮಿ ಹಬ್ಬಕ್ಕೆ ಮಾರುಕಟ್ಟೆಗೆ ಲಗ್ಗೆ ಇಟ್ಟ ಜನರು

ಹುಬ್ಬಳ್ಳಿ: ವರ‌ಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಹುಬ್ಬಳ್ಳಿ ಸಿಟಿ ಮಂದಿ ಮಹಾಲಕ್ಷ್ಮಿಯನ್ನ ಬರಮಾಡಿಕೊಳ್ಳೋದಕ್ಕೆ ಭರ್ಜರಿ ತಯಾರು ಮಾಡಿಕೊಳ್ತಿದ್ದಾರೆ. ಮಾರುಕಟ್ಟೆಗಳಲ್ಲಿ ಜನರು ಪೂಜಾ ಸಾಮಗ್ರಿಗಳ ಖರೀದಿ ಭರಾಟೆಯಲ್ಲಿ ತೊಡಗಿರುವುದು ಕಂಡು ಬಂದಿತು.

ನಗರದ ಜನತಾ ಬಜಾರ, ದುರ್ಗದಬೈಲ್, ಹಳೆ ಹುಬ್ಬಳ್ಳಿ, ಕೇಶ್ವಾಪೂರ ಸೇರಿದಂತೆ ವಿವಿಧ ಮಾರುಕಟ್ಟೆಗಳು ಜನ ಜಂಗುಳಿಯಿಂದ ಕೂಡಿದವು. ಇನ್ನು ಹೂ, ಹಣ್ಣು ಹಾಗೂ ಪೂಜಾ ಸಾಮಗ್ರಿಗಳ ಬೆಲೆ ಗಗನಕ್ಕೇರಿದ್ದು, ಗ್ರಾಹಕರಿಗೆ ಬೆಲೆ ಏರಿಕೆ ಬರೆ ತಟ್ಟಿದಂತಾಗಿದೆ.

Edited By :
Kshetra Samachara

Kshetra Samachara

04/08/2022 09:12 pm

Cinque Terre

29.87 K

Cinque Terre

0

ಸಂಬಂಧಿತ ಸುದ್ದಿ