ಹುಬ್ಬಳ್ಳಿ: ಐತಿಹಾಸಿಕ ಪ್ರಸಿದ್ದ ನಗರದ ಹೊಸೂರಿನ ಗ್ರಾಮ ದೇವತೆಯಾದ ಶ್ರೀ ಗಾಳಿದುರ್ಗಮ್ಮಾ ದೇವಿ ಜಾತ್ರಾ ಮಹೋತ್ಸವವು ಇಂದು ಸಾವಿರಾರು ಭಕ್ತಾದಿಗಳು ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಇಂದು ಬೆಳಿಗ್ಗೆ 5 ಗಂಟೆಗೆ ಶ್ರೀ ದೇವಿಗೆ ವಿಶೇಷ ಅಲಂಕಾರ, ಅಭಿಷೇಕ ಹಾಗೂ ಪೂಜೆಗಳೊಂದಿಗೆ ಉಡಿ ತುಂಬಿದ ನಂತರ, ಹೊಸೂರಿನ ಶ್ರೀ ಆಂಜನೇಯ ದೇವಸ್ಥಾನದಿಂದ ಶ್ರೀ ಗಾಳಿ ದುರ್ಗಾದೇವಿ ದೇವಸ್ಥಾನದ ವರೆಗೂ ನೂರಾರು ಮಹಿಳೆಯರೊಂದಿಗೆ ಕುಂಭ ಮೇಳ ಹಾಗೂ ಪಲ್ಲಕ್ಕಿ ಉತ್ಸವ ಮೆರವಣಿಗೆಯು ವಾದ್ಯ ಮೇಳದೊಂದಿಗೆ ಕಣ್ಮನ ಸೆಳೆಯಿತು.
ಅದೇ ರೀತಿ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಶಿವಣ್ಣ ವಾಯ್ ಹಿರೆಕೇರೂರ, ಚೇತನ್ ಎಸ್ ಹಿರೇಕೆರೂರ, ಹುಚ್ಚರಾಯಪ್ಪ ಕೆ.ಹಿರೇಕೆರೂರ, ಪ್ರಭು ಹಿರೆಕೇರೂರ, ಷಣ್ಮುಖ ಕಟ್ಟಿ, ಹನಮಂತ ಹತ್ತಿ ಬೆಳಗಲ್, ಹನಂಮತಪ್ಪ ಪವಾಡೆ, ಬಂಟಿ ರೇವಣಕರ್, ಸುನಿಲ್ ದಳವಿ,ಸತೀಶ್ ಪಲ್ಟಂಕರ್,ಪ್ರಕಾಶ ತಿಳವಳ್ಳಿ, ದಿನೇಶ್ ಪಟಂಕರ್,ಶಿವಣ್ಣ ಗಾಮನಗಟ್ಟಿ, ಶಂಬಾಜಿ ದಳವಿ, ರಾಜು ಮಾನೆ, ಯಲ್ಲಪ್ಪ ಹೆಬಸೂರ, ಗುರುನಾಥ ಉಳ್ಳಿಕಾಶಿ, ಪ್ರೇಮನಾತ್ ಚಿಕ್ಕತುಂಬಳ, ಆನಂದ ಬೆವಿಕಟ್ಟಿ, ಅನಿಲ್ ಹಿರೇಕೆರೂರ, ಹಿರೇಕೆರೂರ ಕುಟಂಬಸ್ಥರು ಹಾಗೂ ಹೊಸೂರು ಬಳಗ ಹಾಗೂ ಯುವಕ ಮಂಡಳದ ವತಿಯಿಂದ ರಾತ್ರಿ ಅನ್ನಪ್ರಸಾದವನ್ನು ಹೊಸೂರಿನ ಬಿ.ಆರ್.ಟಿ.ಎಸ್ ಬಸ್ ನಿಲ್ದಾಣದ ಎದುರುಗಡೆ ಆಯೋಜಿಸಿದ್ದರು. ಸಾವಿರಾರು ಭಕ್ತಾದಿಗಳು ಅನ್ನಪ್ರಸಾದವನ್ನು ಸ್ವೀಕರಿಸಿದರು.
ಸುಮಾರು 120 ವರ್ಷಗಳ ಐತಿಹಾಸಿಕ ಚರಿತ್ರೆ ಹೊಂದಿರುವ ಈ ದೇವಸ್ಥಾನವನ್ನು, ಹಿರೇಕೆರೂರ ಕುಟುಂಬವು 60 ವರ್ಷಗಳಿಂದ ಶ್ರೀ ಗಾಳಿ ದುರ್ಗಮ್ಮಾ ಜಾತ್ರಾಮಹೋತ್ಸವವನ್ನು ಈ ವರ್ಷವು ಅತೀ ವಿಜೃಂಭಣೆಯಿಂದ ಜಾತ್ರಾಮಹೋತ್ಸವವನ್ನು ನಡೆಸಿಕೊಟ್ಟಿದ್ದು, ಹುಬ್ಬಳ್ಳಿಯ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Kshetra Samachara
20/07/2022 08:18 am