ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಭಕ್ತಿ ಬೆಳಕು ಚೆಲ್ಲಿದ 'ಶ್ರೀಗಳ ನಡೆ ಭಕ್ತರ ಮನೆ ಕಡೆ' ಕಾರ್ಯಕ್ರಮ

ಕುಂದಗೋಳ: ಅದೊಂದು ಧಾರ್ಮಿಕ ಕಾರ್ಯಕ್ರಮ ಅಲ್ಲಿ ಭಕ್ತರದ್ದೇ ಸಿಂಹಪಾಲು ಭಕ್ತಿ, ನಂಬಿಕೆ, ಪ್ರವಚನ, ಸೇವೆ, ಸಂಸ್ಕಾರ, ಪಾದಪೂಜೆ, ಅನ್ನಸಂತರ್ಪಣೆ ನಿರಂತರವಾಗಿ ನಡೆಯುತ್ತಲೇ ಇವೆ.

ಕುಂದಗೋಳ ಪಟ್ಟಣದ ತ್ರಿವಿಧ ದಾಸೋಹಿ ಅಭಿನವ ಕಲ್ಯಾಣಪುರ ಬಸವಣ್ಣನವರ "ನಮ್ಮ ನಡೆ ಭಕ್ತರ ಮನೆ ಕಡೆ" ಎಂಬ ಕಾರ್ಯಕ್ರಮ ಕುಂದಗೋಳ ತಾಲೂಕಿನ ಗ್ರಾಮ ಗ್ರಾಮಗಳಲ್ಲಿ ಭಕ್ತಿ ಸಂಚಲನ ಮೂಡಿಸಿ ಗುಡೇನಕಟ್ಟಿ ಗ್ರಾಮದಲ್ಲಿ 28ನೇ ಕಾರ್ಯಕ್ರಮ ಯಶಸ್ವಿ ಮಾಡಿದೆ. ನಾಲ್ಕು ದಿನ ನಡೆದ ಪ್ರವಚನ ಕಾರ್ಯಕ್ರಮವನ್ನು ಅಭಿನವ ಕಲ್ಯಾಣಪುರ ಬಸವಣ್ಣನವರ ನೇತೃತ್ವದಲ್ಲಿ ಬಸವರಾಜ ದೇವರು ನಡೆಸಿಕೊಟ್ಟಿದ್ದು ಭಕ್ತ ಸಂಕುಲಕ್ಕೆ ಆಧ್ಯಾತ್ಮಿಕತೆಯ ಧಾರೆ ಎರೆಯಲಾಗಿದೆ.

ಇದಲ್ಲದೆ ಪ್ರವಚನದ ಕೊನೆಯ ದಿನ ನಡೆದ ಬಸವ ಬುತ್ತಿಗೆ ಮಹಿಳೆಯರೆಲ್ಲಾ ತಮ್ಮ ತಮ್ಮ ಮನೆಗಳಲ್ಲಿ ಸಿಹಿ ಖಾದ್ಯ, ರೊಟ್ಟಿ ಪಲ್ಲೇ, ಅನ್ನ ಮಾಡಿ ತಂದು ಸಂತರ್ಪಣೆ ಸಹ ಕೈಗೊಂಡಿರುವುದು ಎಲ್ಲೇಡೆ ವಿಶೇಷ ಎನಿಸಿದ್ರೇ ದೀಪಗಳ ಬೆಳಕು ಕಾರ್ಯಕ್ರಮಕ್ಕೆ ಕಳೆ ತಂದಿತ್ತು.

ಒಟ್ಟಿನಲ್ಲಿ ಬಸವ ಬೆಳಕು ಪ್ರವಚನ ಕಲ್ಯಾಣಪುರ ಶ್ರೀಗಳ ಮಠದ ಐವತ್ತನೇ ವರ್ಷದ ಸುವರ್ಣ ಸಂಭ್ರಮ ಕುಂದಗೋಳ ತಾಲೂಕಿನ ಹಳ್ಳಿಗಳಲ್ಲಿ ಭಕ್ತಿ ನೆಲೆಯನ್ನು ಚಿಮ್ಮುತ್ತಲಿದೆ.

-ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ

Edited By : Shivu K
Kshetra Samachara

Kshetra Samachara

05/07/2022 07:06 pm

Cinque Terre

43.98 K

Cinque Terre

1

ಸಂಬಂಧಿತ ಸುದ್ದಿ