ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಶ್ರೀ ಅಜಾತ ನಾಗಲಿಂಗ ಜಾತ್ರಾ ಮಹೋತ್ಸವ ಪ್ರಯುಕ್ತ ಶಾಂತಿ ಸಭೆ

ನವಲಗುಂದ : ಶ್ರೀ ಅಜಾತ ನಾಗಲಿಂಗ ಜಾತ್ರಾ ಮಹೋತ್ಸವದ ಅಂಗವಾಗಿ ಜುಲೈ ತಿಂಗಳ 3 ಭಾನುವಾರ ಹಾಗೂ 4 ಸೋಮವಾರದಂದು ನಡೆಯಲಿರುವ ಜಾತ್ರೆಯ ಪ್ರಯುಕ್ತವಾಗಿ ಬುಧವಾರ ಸಂಜೆ ನಾಗಲಿಂಗ ಸ್ವಾಮೀಜಿ ಮಠದಲ್ಲಿ ಶ್ರೀಗಳು ಹಾಗೂ ತಾಲೂಕಾ ಅಧಿಕಾರಿಗಳ ನೇತೃತ್ವದಲ್ಲಿ ಶಾಂತಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

ವೀರೇಂದ್ರ ಶ್ರೀಗಳ ಸಾನಿಧ್ಯದಲ್ಲಿ, ಪುರಸಭೆ ಅಧ್ಯಕ್ಷರಾದ ಅಪ್ಪಣ್ಣ ಹಳ್ಳದ, ತಹಶೀಲ್ದಾರ್ ಅನೀಲ್ ಬಡಿಗೇರ, ಸಿಪಿಐ ಚಂದ್ರಶೇಖರ ಮಠಪತಿ, ಪಿಎಸ್ಐ ಕಲ್ಮೇಶ ಬೆನ್ನೂರ ನೇತೃತ್ವದಲ್ಲಿ ಶಾಂತಿ ಸಭೆ ಜರುಗಿತು. ಈ ಸಂಧರ್ಭದಲ್ಲಿ ಮಾತನಾಡಿದ ತಹಸೀಲ್ದಾರ್ ಅನೀಲ್ ಬಡಿಗೇರ, ಕೊರೊನಾ ಹಿನ್ನಲೆಯಲ್ಲಿ ಎರಡು ವರ್ಷಗಳಿಂದ ಕಳೆಗುಂದಿದ ಜಾತ್ರೆಗೆ ಈ ಬಾರಿ ಹೊಸ ಮೆರೆಗೂ ಬಂದಿದ್ದು, ಎಲ್ಲರೂ ಸ್ನೇಹ-ಸಹಕಾರದಿಂದ ಜಾತ್ರೆ ಆಚರಣೆ ಮಾಡೋಣ ಎಂದರು.

ಈ ವೇಳೆ ವಿಜಯಪ್ಪಗೌಡ ಪಾಟೀಲ, ಶಿವಪ್ಪ ಸಂಗಟಿ, ನಾಗಪ್ಪ ಹರಿವಾಳದ, ಮಂಜುನಾಥ ಜಾಧವ, ಮಾಂತೇಶ ಭೋವಿ, ದೇವಪ್ಪ ಭೋವಿ, ಗದಿಗೆಪ್ಪ ಭೋವಿ, ಪಕ್ಕೀರಪ್ಪ ಭೋವಿ, ಹಾಗೂ ನಗರದ ಗುರು-ಹಿರಿಯರು ಹಾಗೂ ಯುವಕರು, ಪೊಲೀಸ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

29/06/2022 08:18 pm

Cinque Terre

12.38 K

Cinque Terre

0

ಸಂಬಂಧಿತ ಸುದ್ದಿ