ಕುಂದಗೋಳ : ಪ್ರಕೃತಿಯ ಮುನಿಸೋ, ವರುಣನ ಹಠವೋ ಗೊತ್ತಿಲ್ಲಾ ಭೂತಾಯಿ ಮಡಿಲನ್ನು ಹಸಿರ ಹೊದಿಕೆ ಹಾಕಿದಂತಿರುವ ಬೆಳೆಗಳಿಗೆ ಮಳೆಯ ಅಭಾವ ಎದುರಾಗಿ ರೈತಾಪಿ ಕುಲ ಕಷ್ಟದಲ್ಲಿದೆ.
ಕುಂದಗೋಳ ತಾಲೂಕಿನ ಎಲ್ಲೇಡೆ ಮಳೆಯ ಕೊರತೆ ಹೆಚ್ಚಾದ ಕಾರಣ ಕಡಪಟ್ಟಿ ಗ್ರಾಮದ ರೈತರು ಗೂಳಿ ಬಸವೇಶ್ವರನಿಗೆ ಜಲಾಭಿಷೇಕ ಪೂಜೆ ಕೈಗೊಂಡು ಅನ್ನಸಂತರ್ಪಣೆ ಮಾಡಿ ಮಳೆಗಾಗಿ ಪ್ರಾರ್ಥನೆ ಸಲ್ಲಿದ್ದಾರೆ.
ಗೂಳಿ ಬಸವೇಶ್ವರ ಯುವಕ ಮಂಡಳ ಹಾಗೂ ಹಳ್ಳಿ ರೈತರು ಒಂದಾಗಿ ಕೆರೆ ನೀರಲ್ಲಿ ಮಿಂದೆದ್ದು, ಕೊಡಗಳ ಮೂಲಕ ನೀರನ್ನು ಹೊತ್ತು ತಂದು ಬಸವಣ್ಣನ ಗದ್ದುಗೆಗೆ ಜಲಾಭಿಷೇಕ ಮಾಡಿ ವರಣನ ಕೃಪೆಗೆ ಮೊರೆ ಇಟ್ಟಿದ್ದಾರೆ.
ಕಳೆದ ವರ್ಷ ಅತಿವೃಷ್ಟಿಗಿಡಾಗಿದ್ದ ರೈತಾಪಿ ಕುಲಕ್ಕೆ ಪ್ರಸಕ್ತ ವರ್ಷ ಮಳೆ ಅಭಾವ ಕಾಡುತ್ತಿದ್ದು ಮಳೆಗಾಗಿ ಎಲ್ಲೇಡೆ ದೇವರ ಆರಾಧನೆ, ಪೂಜೆ, ಭಕ್ತಿ, ಧಾರ್ಮಿಕ ಆಚರಣೆಗಳು ಹೆಚ್ಚುತ್ತಲಿವೆ.
Kshetra Samachara
27/06/2022 09:14 pm