ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಡಿಜೆ ಅಬ್ಬರ.. ಭಂಡಾರದ ಮಜ್ಜನ

ಧಾರವಾಡ: ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಗ್ರಾಮದೇವಿಯರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಹೊನ್ನಾಟ ತೀವ್ರ ರಂಗು ಪಡೆದುಕೊಂಡಿದೆ.

ಹೊನ್ನಾಟದ ಮೂರನೇ ದಿನವಾದ ಸೋಮವಾರ ಗ್ರಾಮ ದೇವಿಯರಾದ ದ್ಯಾಮವ್ವ ಮತ್ತು ದುರ್ಗಾದೇವಿಯ ಮೂರ್ತಿಯನ್ನು ಕಲ್ಮೇಶ್ವರ ದೇವಸ್ಥಾನಕ್ಕೆ ಕೊಂಡೊಯ್ಯಲಾಯಿತು. ಅಲ್ಲಿ ಮೂರ್ತಿಗಳನ್ನಿಟ್ಟು, ಉಡಿ ತುಂಬಲಾಯಿತು.

ಮೂರ್ತಿಗಳ ಮೆರವಣಿಗೆಯುದ್ದಕ್ಕೂ ಭಂಡಾರ ಎರಚಲಾಯಿತು. ಹೆಣ್ಣುಮಕ್ಕಳು ಸಹ ಭಂಡಾರ ಎರಚಿ ಸಂಭ್ರಮಿಸಿದರು. ಅಲ್ಲದೇ ಡಿಜೆ ಹಾಡಿಗೆ ಹೆಜ್ಜೆ ಹಾಕಿದರು. ಮೂರನೇ ದಿನವೂ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಹೊನ್ನಾಟದ ಸಂಭ್ರಮ ಮನೆ ಮಾಡಿತ್ತು.

Edited By :
Kshetra Samachara

Kshetra Samachara

09/05/2022 08:32 pm

Cinque Terre

52.11 K

Cinque Terre

3

ಸಂಬಂಧಿತ ಸುದ್ದಿ