ಕುಂದಗೋಳ : ತಾಲೂಕಿನ ಸಂಶಿ ಗ್ರಾಮದ ಜಗದ್ಗುರು ಪಕೀರೇಶ್ವರ ಜಾತ್ರಾ ಮಹೋತ್ಸವದ ಅತಿ ಸಂಭ್ರಮ ಹಾಗೂ ಶಾಸ್ತ್ರೋಕ್ತ ಆಚರಣೆಗೆ ಸಾಕ್ಷಿಯಾಗಿ ಸಂಶಿ ಗ್ರಾಮದ ತುಂಬೆಲ್ಲಾ ಹಬ್ಬದ ವಾತಾವರಣ ಗರಿಗೆದರಿದೆ.
ಹೌದು ! ಸಂಶಿ ಗ್ರಾಮದ ಪಕೀರೇಶ್ವರ ಗದ್ದುಗೆಗೆ ಜಾತ್ರಾ ನಿಮಿತ್ತ ಪೂಜಾಭಿಷೇಕ ನೆರವೇರಿಸಲಾಗಿದ್ದು, ಪಕೀರೇಶ್ವರ ಜಾತ್ರಾಗೆ ಕುಂದಗೋಳ ತಾಲೂಕಿನ ವಿವಿಧೆಡೆಗಳಿಂದ ಭಕ್ತಿ ಜನತೆ ಆಗಮಿಸುತ್ತಿದ್ದು ಅತಿ ಸುಂದರವಾಗಿ ರಥೋತ್ಸವ ಉಚ್ಚಯಾ ಮೆರವಣಿಗೆಗೆ ಸಹ ಸಿದ್ಧಗೊಂಡಿದೆ ಅದರಂತೆ ಜಾತ್ರೆಯಲ್ಲಿ ಪಕೀರೇಶ್ವರ ಮಠದ ಆನೆ ಜಾತ್ರೆಗೆ ಕಳೆ ತಂದಿದೆ.
ಜಾತ್ರೆ ರಥೋತ್ಸವದಲ್ಲಿ ರಥೋತ್ಸವದ ಸಂಭ್ರಮದ ನಡುವೆ ದಿ.ಪವರಸ್ಟಾರ್' ಪುನೀತ್ ರಾಜಕುಮಾರ್ ಭಾವಚಿತ್ರ ಮೆರವಣಿಗೆ ನೋಡುಗರ ಮನ ಗೆದ್ದಿದೆ.
ಇದಲ್ಲದೆ ಸಕಲ ಭಕ್ತಾಧಿಗಳಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿದ್ದು, ಜನರ ಆಧ್ಯಾತ್ಮಿಕ ದೃಷ್ಟಿನೆಲೆ ಪಕೀರೇಶ್ವರ ಜಾತ್ರಾ ಮಹೋತ್ಸವದಲ್ಲಿ ಕಂಡು ಬಂದಿತು.
Kshetra Samachara
25/04/2022 11:04 pm