ಕುಂದಗೋಳ: ಗ್ರಾಮದ ತುಂಬಾ ಶಕ್ತಿ ದೇವತೆ ಮೆರವಣಿಗೆ, ಎಲ್ಲೆಡೆ ಡೊಳ್ಳು ಮೇಳಗಳ ಸದ್ದು, ಗ್ರಾಮದೇವತೆಗೆ ಉಡಿ ತುಂಬುವ ನೈವೇದ್ಯ ಸಮರ್ಪಣೆ ಮಾಡುವ ಭಕ್ತಾದಿಗಳು... ಈ ಎಲ್ಲ ಚಿತ್ರಣ ಕಂಡು ಬಂದಿದ್ದು ಕಡಪಟ್ಟಿ ಗ್ರಾಮದ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ಹಾಗೂ ಪಲ್ಲಕ್ಕಿ ಉತ್ಸವದಲ್ಲಿ.
ಎರಡು ವರ್ಷಗಳಿಂದ ಸಂಕ್ಷಿಪ್ತ ಆಚರಣೆಗೆ ಸೀಮಿತವಾಗಿದ್ದ ಶ್ರೀ ದುರ್ಗಾದೇವಿ ಜಾತ್ರೆ, ಈ ವರ್ಷ ಅತಿ ಸಂಭ್ರಮದಿಂದ ಕುಂದಗೋಳ ತಾಲೂಕಿನ ಕಡಪಟ್ಟಿ ಗ್ರಾಮದಲ್ಲಿ ನಡೆಯಿತು.
ಜಾತ್ರಾ ಮಹೋತ್ಸವದಲ್ಲಿ ಮಹಿಳೆಯರು, ಮುತ್ತೈದೆಯರು, ಜೋಗಮ್ಮಗಳು ಶ್ರೀ ದುರ್ಗಾದೇವಿ ಪಲ್ಲಕ್ಕಿ ಮೆರವಣಿಗೆಯಲ್ಲಿ ಪಾಲ್ಗೊಂಡು ಸಂತಸ ಪಟ್ಟರು.
ಡೊಳ್ಳು ಮೇಳಗಳ ಮೆರವಣಿಗೆಯಂತೂ ಗಮನ ಸೆಳೆಯಿತು. ಕಡಪಟ್ಟಿ ಗ್ರಾಮದ ತುಂಬಾ ಗ್ರಾಮದೇವಿ ಪಲ್ಲಕ್ಕಿ ಮೆರವಣಿಗೆ ಸಂಚರಿಸಿ ಭಕ್ತ ಏಳ್ಗೆಯ ದ್ಯೋತಕವನ್ನು ಸಾರಿ ಹೇಳಿತು.
ಕುಂದಗೋಳ ತಾಲೂಕಿನ ಸುತ್ತಮುತ್ತಲಿನ ಹಳ್ಳಿಯ ಗ್ರಾಮಸ್ಥರು ಜಾತ್ರಾ ಉತ್ಸವದಲ್ಲಿ ಪಾಲ್ಗೊಂಡು ಖುಷಿ ಪಟ್ಟರು.
Kshetra Samachara
12/04/2022 09:13 am