ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಮನಕವಾಡ ಶ್ರೀ ಅನ್ನದಾನೇಶ್ವರ ದೇವ ಮಂದಿರದ ಜೀರ್ಣೋದ್ಧಾರ

ಅಣ್ಣಿಗೇರಿ: ತಾಲೂಕಿನ ಮನಕವಾಡ ಎಂದ ಕೂಡಲೇ ನಮಗೆ ನೆನಪಿಗೆ ಬರೋದು ಒಂದೇ ಹೆಸರು. ಅದುವೇ ಶ್ರೀ ಮೃತ್ಯುಂಜ ಅಜ್ಜನವರ ಹೆಸರು. ನಿಜ, ಇವರ ಶ್ರೀ ಅನ್ನದಾನೇಶ್ವರ ದೇವ ಮಂದಿರದ ಜೀರ್ಣೋದ್ಧಾರ ಕೆಲಸ ಭರದಿಂದಲೇ ಸಾಗಿದೆ.

ಒಟ್ಟು 24 ಎಕರೆಯಲ್ಲಿ ನಾಲ್ಕು ಸಾವಿರ ಗಿಡಗಳನ್ನು ನೆಟ್ಟು 15 ಎಕರೆಯ ಅಜ್ಜನ ಧಾಮ (ಉದ್ಯಾನವನ) ಇನ್ನುಳಿದ ಜಾಗದಲ್ಲಿ ಸಿಬಿಎಸ್ಸಿ ಶಾಲೆ, ವೃದ್ಧಾಶ್ರಮ, ಕಾರ್ಯಕ್ರಮದ ಚಾವಣಿ,ಕೆರೆ ಸೇರಿದಂತೆ ಹೀಗೆ ಹಲವಾರು ಕೆಲಸಗಳು ನಡೆದಿರುತ್ತವೆ.

ದೇವಸ್ಥಾನದ ಮುಖ್ಯದ್ವಾರ, ದೇವರ ಗದ್ದಿಗೆ, ಪ್ರಾಂಗಣ, ಛಾವಣಿ ಸೇರಿದಂತೆ ದೇವಸ್ಥಾನದ ಒಳಗಡೆ ಎಲ್ಲವೂ ಕಲ್ಲಿನಿಂದ ತಯಾರಾಗುತ್ತಿದ್ದು, ಕೆಲಸಗಳು ಪ್ರಗತಿಯಲ್ಲಿವೆ.

ರಾಜ್ಯದ ನಾನಾ ಭಾಗಗಳಿಂದ ಬಂದ ಕೆಲಸಗಾರರು ಮಠದ ಕೆಲಸಗಳಲ್ಲಿ ನಿರತರಾಗಿದ್ದಾರೆ. ಬರುವ ವರ್ಷ ಎಲ್ಲ ಕೆಲಸಗಳು ಮುಕ್ತಾಯ ಆಗಲಿವೆ.

ಶ್ರೀ ಮೃತ್ಯುಂಜ ಶ್ರೀಗಳು ತಾವೇ ಮುಂದು ನಿಂತು ಈ ಎಲ್ಲ ಕೆಲಸಗಳನ್ನು ನಿಭಾಯಿಸುತ್ತಿದ್ದಾರೆ. ಇವರಿಗೆ ಗ್ರಾಮಸ್ಥರು ಸಹ ಕೈ ಜೋಡಿಸಿರುತ್ತಾರೆ.

ನಂದೀಶ್ ಪಬ್ಲಿಕ್ ನೆಸ್ಟ್ ಅಣ್ಣಿಗೇರಿ

Edited By : Nagesh Gaonkar
Kshetra Samachara

Kshetra Samachara

03/03/2022 08:15 am

Cinque Terre

42.33 K

Cinque Terre

1

ಸಂಬಂಧಿತ ಸುದ್ದಿ