ಕುಂದಗೋಳ: ಮಹಾಶಿವರಾತ್ರಿ ಅಂಗವಾಗಿ ಶಂಭುಲಿಂಗೇಶ್ವರ ದರ್ಶನಕ್ಕೆ ಭಕ್ತರು ದಂಡು ಹರಿದು ಬರುತ್ತಿದ್ದು, ಶಂಭುಲಿಂಗೇಶ್ವರ ಸನ್ನಿಧಿ ಭಕ್ತರ ಆಗಮನದಿಂದ ಕಳೆಗಟ್ಟಿದೆ.
ಇಂದು ಶಂಭುಲಿಂಗೇಶ್ವರನಿಗೆ ಮುಂಜಾನೆ 8 ಘಂಟೆಗೆ ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ನಾರಿಕೇಳ ಅಭಿಷೇಕ, ಬಿಲ್ವಾರ್ಚನೆ, ಮಹಾಪೂಜೆ, ಮಂಗಳಾರತಿ ಸೇವೆ ಸಲ್ಲಿಸಲಾಗಿದೆ. ಸಾಯಂಕಾಲ 6 ಘಂಟೆಗೆ ದೀಪೋತ್ಸವ, ಪಾಲಕಿ ಸೇವೆ ಭಜನಾ ಕಾರ್ಯಕ್ರಮಗಳು ರಾತ್ರಿ 10 ಘಂಟೆಯಿಂದ ಯಾಮ ಪೂಜೆಯ ರುದ್ರಾಭಿಷೇಕ ಬೆಳಗಿನವರೆಗೆ ನಡೆಯಲಿದ್ದು ಆ ತಯಾರಿ ಜೋರಾಗಿದೆ.
ಶಂಭುಲಿಂಗೇಶ್ವರ ಸನ್ನಿಧಿಯಲ್ಲಿ ಸರಸ್ವತಿ, ಗಣಪ, ನಂದಿ, ನವಗ್ರಹ ಮೂರ್ತಿಗಳಿಗೂ ಸಹ ವಿಶೇಷ ಪೂಜೆ ನೆರವೇರಿದ್ದು, ಭಕ್ತರು ರಂಗೋಲಿಯಲ್ಲಿ ದೇವಸ್ಥಾನದಲ್ಲಿ ಶಿವನ ಚಿತ್ರ ಬಿಡಿಸಿ ಭಕ್ತಿ ಮೆರೆದಿದ್ದಾರೆ. ಕುಂದಗೋಳ ಪಟ್ಟಣ ಹಾಗೂ ತಾಲೂಕಿನ ಹಳ್ಳಿಗರು ಶಂಭುಲಿಂಗೇಶ್ವರನ ಸನ್ನಿಧಿಗೆ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ.
Kshetra Samachara
01/03/2022 04:48 pm