ಹುಬ್ಬಳ್ಳಿ: ಇಂದು ಮಹಾಶಿವರಾತ್ರಿ ಹಿನ್ನೆಲೆಯಲ್ಲಿ, ಹುಬ್ಬಳ್ಳಿಯ ಪ್ರಸಿದ್ಧ ಶ್ರೀ ಸಿದ್ದಾರೂಢ ಅಜ್ಜನವರ ಮಠದ ಆವರಣದಲ್ಲಿ ಜಾತ್ರೆ ನಡೆಯಲಿದೆ. ಇದರ ಅಂಗವಾಗಿ ಇಂದು ಬೆಳ್ಳಂಬೆಳಿಗ್ಗೆಯೇ ಸಿದ್ದಾರೂಢರ ಗದ್ದುಗೆ ದರ್ಶನಕ್ಕೆ ಸಾವಿರಾರು ಭಕ್ತರು ಅಗಮಿಸುತ್ತಿದ್ದಾರೆ.
ಪ್ರತಿ ಶಿವರಾತ್ರಿಗೆ ಅದ್ಧೂರಿಯಾಗಿ ನೆರವೇರುವ ಜಾತ್ರೆಗೆ ದೂರದ ಊರುಗಳಿಂದ ಸಾವಿರಾರು ಜನ ಬರ್ತಾರೆ. ಇಂದು ಶಿವರಾತ್ರಿ ಇರುವುದರಿಂದ ಸಿದ್ಧಾರೂಢರಿಗೆ ವಿಶೇಷ ಪೂಜೆ ಮಾಡಲಾಗುತ್ತೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ರದ್ದಾಗಿದ್ದ ಜಾತ್ರೆ, ಈ ವರ್ಷ ಅದ್ಧೂರಿಯಾಗಿ ನಡೆಯುತ್ತಿದೆ. ಜಾತ್ರೆಯ ಸಂಭ್ರಮಕ್ಕೆ ಮಠದ ಆವರಣ ಸಜ್ಜಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
01/03/2022 09:16 am