ವರದಿ: ಬಿ.ನಂದೀಶ
ಅಣ್ಣಿಗೇರಿ; ಪಟ್ಟಣದಲ್ಲಿ ಜ್ಯೋತಿ ಸ್ವರೂಪ್ ಅಯ್ಯಪ್ಪ ಸೇವಾ ಸಮಿತಿ ಶಬರಿ ನಗರದ ಅಯ್ಯಪ್ಪ ಮಾಲಾಧಾರಿಗಳಿಂದ ಹಾಗೂ ಶ್ರೀ ಗುರುಸ್ವಾಮಿಯವರ ನೇತೃತ್ವದಲ್ಲಿ ಕುಂಭಮೇಳ ದೊಂದಿಗೆ ಶ್ರೀ ಅಯ್ಯಪ್ಪ ಸ್ವಾಮಿಯ ಮೆರವಣಿಗೆ ಜರುಗಿತು.
ಇನ್ನು ಇದೇ ದಿನಾಂಕ 06-01-2022 ರಂದು ಪಟ್ಟಣದ ಶ್ರೀ ಕಾಳಮ್ಮದೇವಿ ದೇವಸ್ಥಾನದ ಆವರಣದಲ್ಲಿ ಮಧ್ಯಾಹ್ನ 12 ಗಂಟೆಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ ನಂತರ 9 ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿಯ ಕೊನೆಯ ಮಹಾಪೂಜೆ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿಯ 18 ತರಹದ ಅಭಿಷೇಕಗಳು ನಡೆಯಲಿದೆ. ಮತ್ತು ದಿನಾಂಕ 12-01-2022 ರಂದು ಬುದುವಾರ ಸನ್ನಿಧಾನದಲ್ಲಿ ಇರುಮುಡಿ ಕಟ್ಟುವ ಕಾರ್ಯಕ್ರಮ ಮತ್ತು ಶಬರಿಮಲೆ ಯಾತ್ರೆಗೆ ಹೊರಡುವುದೆಂದು ಸೇವಾ ಸಮಿತಿಯಿಂದ ತಿಳಿಸಿರುತ್ತಾರೆ.
Kshetra Samachara
04/01/2022 02:07 pm