ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಜ. 14ರಂದು ಕಾಶಿಯಲ್ಲಿನ ಗಂಗಾ ಆರತಿ ಮಾದರಿಯಂತೆ ತುಂಗಾಭದ್ರಾ ಮಂಟಪ ನಿರ್ಮಾಣ ಕಾರ್ಯಕ್ಕೆ ಚಾಲನೆ

ಹುಬ್ಬಳ್ಳಿ : ಕಾಶಿಯಲ್ಲಿರುವ ಗಂಗಾ ಆರತಿ ಮಾದರಿಯಲ್ಲಿ ದಕ್ಷಿಣ ಭಾರತದ ಹರಕ್ಷೇತ್ರ ಹರಿಹರದಲ್ಲಿ ನಿರ್ಮಿಸಲು ಯೋಜಿಸಿರುವ ತುಂಗಾಭದ್ರಾ ಆರತಿ ಮಂಟಪಗಳ ನಿರ್ಮಾಣ ಕಾರ್ಯದ ಉದ್ಘಾಟನಾ ಕಾರ್ಯಕ್ರಮ ಜನವರಿ 14ರಂದು ನಡೆಯಲಿದೆ.

ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು ಈ ಉದ್ಘಾಟನೆ‌ ನೆರವೇರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಈ ತುಂಗಭದ್ರಾ ಆರತಿ ಮಂಟಪಗಳ ನೀಲಿ ನಕ್ಷೆಯ ಬಗ್ಗೆ ಹರಕ್ಷೇತ್ರ ಹರಿಹರ ಪಂಚಮಸಾಲಿ ಜಗದ್ಗುರು ಪೀಠದ ಪೀಠಾಧ್ಯಕ್ಷರಾದ ಶ್ರೀ ವಚನಾನಂದ ಮಹಾಸ್ವಾಮೀಜಿ ಅವರು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ಮಾಹಿತಿಯನ್ನು ಪಡೆದುಕೊಂಡರು. ಈ ನೀಲಿನಕ್ಷೆಯನ್ನು ಸಿಎಂ ಬಸವರಾಜ್ ಬೊಮ್ಮಾಯಿಗೆ ತೋರಿಸಿದರು.

ಇತ್ತೀಚೆಗೆ ಕಾಶಿಗೆ ಭೇಟಿ ನೀಡಿದ್ದ ಬೊಮ್ಮಾಯಿ ಅವರು ತಾವು ಕಾಶಿಯಲ್ಲಿ ನೋಡಿದ ಗಂಗಾ ಆರತಿಯ ಕೆಲ ಅಂಶಗಳನ್ನು ಈ ಯೋಜನೆಯಲ್ಲಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

30/12/2021 11:14 am

Cinque Terre

45.41 K

Cinque Terre

3

ಸಂಬಂಧಿತ ಸುದ್ದಿ