ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಬೆಂಕಿಯಲ್ಲಿ ಹಾಯ್ದ ಪಾಂಜಾಗಳು

ಧಾರವಾಡ: ಶೋಕಾಚರಣೆ ಹಾಗೂ ಭಾವೈಕ್ಯತೆಯ ಸಂಕೇತವಾದ ಮೊಹರಂ ಹಬ್ಬವನ್ನು ಇಂದು ಧಾರವಾಡ ಜಿಲ್ಲೆಯಾದ್ಯಂತ ಆಚರಿಸಲಾಗಿದೆ.

ಕೊರೊನಾ ಹಿನ್ನೆಲೆಯಲ್ಲಿ ಪಾಂಜಾ ಹಾಗೂ ಡೋಲಿಗಳ ಮೆರವಣಿಗೆಗೆ ಅವಕಾಶ ನೀಡಿರಲಿಲ್ಲ. ಆದರೆ, ಅಲ್ಲಲ್ಲಿ ಸಂಪ್ರದಾಯದ ಬದ್ಧವಾಗಿಯೇ ಹಬ್ಬವನ್ನು ಆಚರಿಸಲಾಗಿದೆ.

ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಸಮೀಪ ಇರುವ ಹನುಮನಹಾಳ ಗ್ರಾಮದಲ್ಲಿ ಪಾಂಜಾಗಳನ್ನು ಬೆಂಕಿಯಲ್ಲಿ ಹಾಯಿಸುವ ಮೂಲಕ ಮೊಹರಂ ಹಬ್ಬವನ್ನು ಆಚರಿಸಲಾಗಿದೆ.

ಕೊರೊನಾ ಇಲ್ಲದೇ ಹೋಗಿದ್ದರೆ ಎಲ್ಲ ಕಡೆ ಬೆಂಕಿ ಹಾಯಿಸುವ ಕಾರ್ಯಕ್ರಮ ನಡೆಯುತ್ತಿತ್ತು. ಹನುಮನಹಾಳ ಗ್ರಾಮದಲ್ಲಿ ಸಂಪ್ರದಾಯದ ಪ್ರಕಾರ ಪಾಂಜಾಗಳನ್ನು ಬೆಂಕಿಯಲ್ಲಿ ಹಾಯಿಸಿ ಹಬ್ಬವನ್ನು ಸಂಕ್ಷೀಪ್ತವಾಗಿ ಆಚರಿಸಿದ್ದಾರೆ.

ಗ್ರಾಮದ ಹಿಂದೂ ಹಾಗೂ ಮುಸ್ಲಿಂ ಸಮುದಾಯದವರು ಕೂಡಿಕೊಂಡೇ ಹಬ್ಬವನ್ನು ಆಚರಿಸಿ ಭಾವೈಕ್ಯತೆ ಮೆರೆದಿದ್ದಾರೆ.

Edited By : Shivu K
Kshetra Samachara

Kshetra Samachara

20/08/2021 01:27 pm

Cinque Terre

57.13 K

Cinque Terre

2

ಸಂಬಂಧಿತ ಸುದ್ದಿ