ನವಲಗುಂದ : ಪಟ್ಟಣದ ಭೋವಿ ಓಣಿಯಲ್ಲಿ ಪ್ರತಿ ವರ್ಷದಂತ್ತೆ ಈ ವರ್ಷವೂ ನಾಗರ ಪಂಚಮಿ ಹಿನ್ನೆಲೆ ಈಶ್ವರ ಲಿಂಗವನ್ನು ರಚಿಸಿ ಅದಕ್ಕೆ ಪೂಜೆ ಸಲ್ಲಿಸಿ ಸಂಭ್ರಮದಿಂದ ನಾಗರ ಪಂಚಮಿ ಆಚರಿಸಲಾಯಿತು.
ನಾಗರ ಪಂಚಮಿಯು ರೈತರ ಹಬ್ಬವಾಗಿದೆ. ಅದರಲ್ಲಿಯೂ ಮುಂಗಾರು ಬೆಳೆ ಬರುವ ಹಿನ್ನೆಲೆಯಲ್ಲಿ ರೈತರಿಗೆ ಇದು ಸಂಭ್ರಮದ ಹಬ್ಬ. ವಿಷ ಜಂತು ಎಂದು ಕರೆಯುವ ಹಾವುಗಳು ರೈತರಿಗೆ ಕೃಷಿ ಸ್ನೇಹಿಗಳಾಗಿವೆ. ಮಣ್ಣಿನಲ್ಲಿರುವ ಕೀಟಗಳನ್ನು ತಿನ್ನುವ ಹಾವುಗಳು ಭೂಮಿಯ ಫಲವತ್ತಾದ ಪ್ರದೇಶದಲ್ಲಿಯ ಹುತ್ತದಲ್ಲಿ ವಾಸವಾಗಿರುತ್ತವೆ ಎಂಬ ನಂಬಿಕೆ ಇದೆ.
Kshetra Samachara
13/08/2021 07:42 pm