ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಲೋಕದ ಒಳಿತಿಗಾಗಿ ಉಳವಿಗೆ ಬಸವಣ್ಣಜ್ಜ ಪಾದಯಾತ್ರೆ

ಕುಂದಗೋಳ : ಲೋಕದ ಒಳಿತಿಗಾಗಿ ಕುಂದಗೋಳ ಪಟ್ಟಣದ ಅಭಿನವ ಕಲ್ಯಾಣಪುರ ಬಸವಣ್ಣನವರ ಶ್ರೀ ಕ್ಷೇತ್ರ ಉಳವಿಗೆ ಭಕ್ತರು ಸಮ್ಮುಖದಲ್ಲಿ ಪಾದಯಾತ್ರೆ ಕೈಗೊಂಡಿದ್ದಾರೆ.

ಇಡೀ ವಿಶ್ವಕ್ಕೆ ಅಪ್ಪಳಿಸಿದ ಕೊರೊನಾ ಹಾಗೂ ಅತಿವೃಷ್ಟಿ ಪರಿಣಾಮ ತತ್ತರಿಸಿದ ರೈತ ಸಮೂಹಕ್ಕೆ ಒಳ್ಳೆಯ ಮಳೆ ಬೆಳೆ ಸಿಗಲೇಂದು ಆಶಿಸಿದ ಅವರು ಇಂದು ಬೆಳಿಗ್ಗೆ ತ್ರೀವಿಧ ದಾಸೋಹಿ ಲಿಂಗೈಕ್ಯ ಕಲ್ಯಾಣಪುರ ಬಸವಣ್ಣನವರ ಸನ್ನಿಧಿಗೆ ನಮಸ್ಕರಿಸಿ ಕುಂದಗೋಳ ಕಲ್ಯಾಣಪುರ ಮಠದಿಂದ ಉಳಿವಿಗೆ ಪಾದಯಾತ್ರೆ ಕೈಗೊಂಡರು.

ಬಸವಣ್ಣನವರ ಪಾದಯಾತ್ರೆಗೆ ಕುಂದಗೋಳ ಪಟ್ಟಣ ಸೇರಿದಂತೆ ವಿವಿಧ ಹಳ್ಳಿಯ ಭಕ್ತಾಧಿಗಳು ಸಾಥ್ ನೀಡಿದ್ದು ಉಳಿವಿಗೆ ಪ್ರಮಾಣ ಮುಂದುವರೆದಂತೆ ಆಯಾ ಗ್ರಾಮಗಳ ಗ್ರಾಮಸ್ಥರು ಕಲ್ಯಾಣಪುರ ಬಸವಣ್ಣನವರ ಪಾದಯಾತ್ರೆಗೆ ಜೊತೆ ಯಾಗಲಿದ್ದಾರೆ.

ವಿಶೇಷವೆಂದರೆ ವಯೋ ವೃದ್ಧರು ಮಧ್ಯ ವಯಸ್ಸಿನವರು ಸಹ ಶ್ರೀ ಕ್ಷೇತ್ರ ಉಳಿವಿಗೆ ಪಾದಯಾತ್ರೆಯಲ್ಲಿ ಭಾಗಿಯಾಗಿರುವುದು ಭಕ್ತರ ಭಕ್ತಿಯನ್ನು ಇಮ್ಮಡಿಗೊಳಿಸಿದೆ.

Edited By : Manjunath H D
Kshetra Samachara

Kshetra Samachara

24/02/2021 08:05 pm

Cinque Terre

20.26 K

Cinque Terre

0

ಸಂಬಂಧಿತ ಸುದ್ದಿ