ಹುಬ್ಬಳ್ಳಿ : ನಗರದ ಗಬ್ಬೂರ ಬಳಿಯ ಹುಬ್ಬಳ್ಳಿ ಮೂರು ಸಾವಿರ ಮಠದ ಜಮೀನಿನಲ್ಲಿ ನಿರ್ಮಿಸಲಿರುವ KLE ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಧಾರವಾಡ ಜಿಲ್ಲೆಯ ವೀರಶೈವ ಲಿಂಗಾಯತ ಸಮಾಜದವರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಕೆಎಲ್ ಇ ಅಧ್ಯಕ್ಷ ಪ್ರಭಾಕರ ಕೋರೆ ಅವರು ವೀರಶೈವ ಲಿಂಗಾಯತ ಒಳಪಂಗಡಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ. ಶರಣಪ್ಪ ಕೊಟಗಿ ಅವರಿಗೆ ಭರವಸೆ ನೀಡಿದ್ದಾರೆ.
ಕೆಲವು ಪ್ರಮುಖ ಬೇಡಿಕೆಗಳನ್ನು ಪ್ರಸ್ತಾಪಸಿ ಡಾ.ಶರಣಪ್ಪ ಕೊಟಗಿ ಅವರ ಪತ್ರಕ್ಕೆ ಉತ್ತರ ನೀಡಿರುವ ಕೋರೆ ಅವರು, ಈಗಾಗಲೇ ಬೆಳಗಾವಿ ಕೆಎಲ್ಇ ಆಸ್ಪತ್ರೆಯಲ್ಲಿ ಬಡರೋಗಿಗಳಿಗೆ ಉಚಿತ ಅತ್ಯಾಧುನಿಕ ಚಿಕಿತ್ಸೆ ನೀಡಲಾಗುತ್ತಿದ್ದು ಅದು ಹುಬ್ಬಳ್ಳಿಯಲ್ಲಿಯೂ ಮುಂದುವರಿಯಲಿದೆ. ಲಿಂಗೈಕ್ಯ ಜಗದ್ಗುರು ಗಂಗಾಧರ ರಾಜಯೋಗೀಂದ್ರ ಮಹಾಸ್ವಾಮಿಗಳ ಸಂಕಲ್ಪದಂತೆ ಈ ಭಾಗದ ಬಡರೋಗಿಗಳಿಗೆ ವೈದ್ಯಕೀಯ ಸೇವೆ ದೊರೆಯುವಂತೆ ಮಾಡುವುದು ಕೆಎಲ್ಇ ಧ್ಯೇಯವಾಗಿದೆ ಎಂದೂ ಅವರು ವಿವರಿಸಿದ್ದಾರೆ.
ಆದರೆ ಮೆಡಿಕಲ್ ಸೀಟ್ ಹಂಚಿಕೆ ವಿಚಾರ ತಮ್ಮ ವ್ಯಾಪ್ತಿಗೆ ಬರುವುದಿಲ್ಲ. ಅಂದರೆ NEET ಪರೀಕ್ಷ Rank ಆಧಾರೆ ಮೇಲೆ ಹಾಗೂ ರಾಜ್ಯ ಸರಕಾರದ ನಿಯಮಾವಳಿ ಅನ್ವಯ ಸೀಟುಗಳ ದಾಖಲಾತಿ ನಡೆಯುತ್ತದೆ. ಆದಾಗ್ಯೂ ಉತ್ತರ ಕರ್ನಾಟಕದ ವಿದ್ಯಾರ್ಥಿಗಳೆ ಸೀಟು ಕೊಡಿಸುವ ತಮ್ಮ ಪ್ರಯತ್ನ ಮುಂದುವರಿಯಲಿದೆ ಎಂದೂ ತಿಳಿಸಿದ್ದಾರೆ.
ಸಭೆ ಮುಂದಕ್ಕೆ
17-1-2021 ರಂದು ಶ್ರೀ ಮೂರುಸಾವಿರ ಮಠದಲ್ಲಿ ಬೇಡಿಕೆಗಳ ಆಗ್ರಹಕ್ಕಾಗಿ ಕರೆಯಲಾದ ಭಕ್ತರ/ಪದಾಧಿಕಾರಿಗಳ ಸಭೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಮುಂದಿನ ದಿನಗಳಲ್ಲಿ ಕೆಎಲ್ಇ ಸಂಸ್ಥೆಯು ಮಾತಿಗೆ ತಪ್ಪಿದಲ್ಲಿ ಮುಂದೆ ಸಭೆ ಕರೆದು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವದು ಎಂದು ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಒಳಪಂಗಡಗಳ ಒಕ್ಕೂಟದ ಅಧ್ಯಕ್ಷರಾದ ಡಾ ಶರಣಪ್ಪ ಕೋಟಗಿ ಪದಾಧಿಕಾರಿಗಳಾದ ಬಂಗಾರೇಶ ಹಿರೇಮಠ ರಾಜಶೇಖರ್ ಮೆಣಸಿನಕಾಯಿ ಸುರೇಶ್ ಸವಣೂರ್ ಪ್ರಕಾಶ್ ಗೌಡ ಪಾಟೀಲ್ ಡಾ ಶಿವಯೋಗಿ ತೆಂಗಿನಕಾಯಿ ಎಂ ಪಿ ಶಿವಕುಮಾರ್ ಶ್ರೀಮತಿ ಶೈಲಜಾ ಹಿರೇಮಠ ರಾಜಶೇಖರ್ ಕಲ್ಯಾಣ ಶೆಟ್ಟರ್ ಸೇರಿದಂತೆ ಮುಂತಾದವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ
Kshetra Samachara
16/01/2021 02:48 pm