ಅಣ್ಣಿಗೇರಿ : ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದ ಪಟ್ಟಣದ ಆರಾಧ್ಯ ದೈವ ಶ್ರೀ ಅಮೃತೇಶ್ವರ ದೇವಸ್ಥಾನದ ರಥೋತ್ಸವವು ಇದೇ ದಿ.29.12.2020 ರಂದು ನಡೆಯಬೇಕಿತ್ತು. ಆದರೆ ಕೋವಿಡ-19 ಹಿನ್ನೆಲೆ ಈ ಸಲದ ರಥೋತ್ಸವ ರದ್ದುಗೊಳಿಸಲಾಗಿದೆ ಎಂದು ದೇವಸ್ಥಾನದ ಟ್ರಸ್ಟ್ ಪಬ್ಲಿಕ್ ನೆಕ್ಸ್ಟ್ ಗೆ ತಿಳಿಸಿದೆ.
ಜಾತ್ರಾ ನಿಮಿತ್ತ ಜರುಗಬೇಕಾಗಿದ್ದ ವಿಶೇಷ ಪೂಜೆ ಕೈಂಕರ್ಯಗಳನ್ನು ಕೂಡ ಸ್ಥಗಿತಗೊಳಿಸಲಾಗಿದೆ. ಅಂದು ಸರ್ಕಾರದ ನಿಯಮಗಳ ಪ್ರಕಾರ ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ಮೂಲಕ ಭಕ್ತಾಧಿಗಳಿಗೆ ಶ್ರೀ ಅಮೃತೇಶ್ವರನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಜಾತ್ರಾ ಕಮೀಟಿ ತಿಳಿಸಿದೆ.
Kshetra Samachara
22/12/2020 08:27 pm