ಕಲಘಟಗಿ:ತಾಲೂಕಿನ ದಾಸ್ತಿಕೊಪ್ಪ ಹನ್ನೆರಡು ಮಠದ ಲಿಂ.ಶ್ರೀ ಷ ಬ್ರ ಮಡಿವಾಳ ಶಿವಾಚಾರ್ಯ ಸ್ವಾಮಿಗಳ ಲಿಂಗಾಂಗಸಾಮರಸ್ಯದ 30ನೇ ವರ್ಷದ ಪುಣ್ಯ ಸ್ಮರಣೋತ್ಸವ ಸಮಾರಂಭ ದಿ:೧೨ ರಂದು ಶನಿವಾರ ಶ್ರೀ ಮಠದಲ್ಲಿ ಜರುಗಲಿದೆ.
ಬಾಳೆಹೊನ್ನುರಿನ ಶ್ರೀ ಮದ್ರರಂಭಾಪುರಿ ಜಗದ್ಗುರುಗಳು ಧರ್ಮಸಭೆಯ ದಿವ್ಯಸಾನಿಧ್ಯವನ್ನು ವಹಿಸಲಿದ್ದಾರೆ.ಶ್ರೀ ರೇವಣಸಿದ್ಧ ಶಿವಾಚಾರ್ಯ ಸ್ವಾಮಿಜಿ ಅಧ್ಯಕ್ಷತೆ ವಹಿಸಲಿದ್ದಾರೆ.ಶಾಸಕ ಸಿ ಎಂ ನಿಂಬಣ್ಣವರ ಉದ್ಘಾಟನೆ ನೆರವೇರಿಸಲಿದ್ದಾರೆ.ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು,ವೇದ ಘೋಷ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
Kshetra Samachara
11/12/2020 08:27 pm