ಅಳ್ನಾವರ : ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ವತಿಯಿಂದ ಭಾರತೀಯ ಸ್ಟೇಟ್ ಬ್ಯಾಂಕ್ ವ್ಯವಸ್ಥಾಪಕಿ ಮಧುಸ್ವಿನಿ ದೇಸಾಯಿ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ದೇಸಾಯಿಯವರು, ನಾರಿಯನ್ನು ಶಕ್ತಿ ದೇವತೆಯ ಸ್ಥಾನದಲ್ಲಿ ಪೂಜಿಸಲ್ಪಡುತ್ತಿದ್ದು ಎಲ್ಲಾ ಕ್ಷೇತ್ರದಲ್ಲಿಯೂ ಮಹಿಳೆಯರು ಮುಂದು ಬರುತ್ತಿದ್ದು ಅವರ ಸಾಧನೆಗೆ ಪುರುಷರು ಕಾರಣರಾಗಿದ್ದಾರೆ ಎಂದರು.
ಕಸಾಪ ಅಧ್ಯಕ್ಷ ಡಾ.ಬಸವರಾಜ ಮೂಡಬಾಗಿಲ ಅವರು ಮಾತನಾಡಿ ಮಹಿಳೆಯರ ಸಮಾನತೆ ಕುರಿತು ವಿವರಿಸಿದರು. ಇದೆ ಸಮಯದಲ್ಲಿ ಕಸಾಪ ಮಹಿಳಾ ಸದಸ್ಯರನ್ಬು ಸನ್ಮಾನಿಸಲಾಯಿತು.
Kshetra Samachara
08/03/2022 06:20 pm