ಹುಬ್ಬಳ್ಳಿ: ಹುಬ್ಬಳ್ಳಿಯ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಕಾರ್ಯವೈಕರಿಗೆ ಜನ ಅಕ್ಷರಶಃ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಕಳೆದ ಬಾರಿ ಮಳೆ ಸುರಿದು ಅತಿವೃಷ್ಟಿ ನಡೆದ ಸಂದರ್ಭದಲ್ಲಿ ಸಿನಿಮಾ ಪ್ರಮೋಷನ್ ಮಾಡಿದ್ದರು.
ಈ ಬಾರಿ ಮನೆಗೆ ನೀರು ನುಗ್ಗಿ ನಮ್ಮ ಜೀವನ ಅಸ್ತವ್ಯಸ್ಥೆ ಆಗಿದೆ ಆದ್ರೂ ಮಾಜಿ ಸಿಎಂ ಭೇಟಿ ನೀಡಿಲ್ಲ ಸೌಜನ್ಯಕ್ಕೆ ಆದ್ರೂ ನಮ್ಮ ಸಮಸ್ಯೆ ಆಲಿಸಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿ ಮನೆ ಮುಂದೆ ಭಜನೆ ಮಾಡುತ್ತಿದ್ದಾರೆ.
ಬಾದಾಮಿ ನಗರದಲ್ಲಿನ ಜಗದೀಶ ಶೆಟ್ಟರ್ ಮನೆ ಮುಂದೆ ಶಿವಾಯ ನಮಃ ಓಂ ಎನ್ನುವ ನಾಮದೆಯದೊಂದಿಗೆ ಪ್ರತಿಭಟನೆ ನಡೆಸಿದ ಹತ್ತಾರು ಕಾಂಗ್ರೆಸ್ ಕಾರ್ಯಕರ್ತರು ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ ,ಕಾರ್ಪೊರೇಟರ್ ಸುವರ್ಣ ಮಣಿಕುಂಟ್ಲ್ ಸಾಥ್ ನೀಡಿದರು
ಇನ್ನು ಒಂದು ಗಂಟೆ ಪ್ರತಿಭಟನೆ ನಡೆಸಿದರು ಜಗದೀಶ್ ಶೆಟ್ಟರ್ ಮನವಿ ಸ್ವೀಕರಿಸಲು ಬರಲಿಲ್ಲ ಈ ಬಗ್ಗೆ ಮನವಿಯನ್ನು ಆಪ್ತರಿಗೆ ನೀಡುವಂತೆ ಪೊಲೀಸರು ಮನವಿ ಮಾಡಿದರು ಪ್ರತಿಭಟನಾಕಾರರು ಜಗ್ಗದೆ ಜಗದೀಶ ಶೆಟ್ಟರ್ ಬಂದು ಮನವಿ ಸ್ವೀಕಾರ ಮಾಡುವವರೆಗೂ ಮನೆಯ ಮುಂದೆ ಭಜನೆ ಮುಂದುವರೆಸುತ್ತೇವೆ ಅಂತಾ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ.
ಸದ್ಯ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಜಗದೀಶ ಶೆಟ್ಟರ ಮನೆ ಮುಂದೆ ಕೇಶ್ವಾಪುರ ಠಾಣೆಯ ಪೊಲೀಸರು ಸೂಕ್ತ ಬಂದೋಬಸ್ತ್ ಮಾಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
11/10/2022 09:25 pm