ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿರುವ ಐಟಿ ಪಾರ್ಕ್ ಹಾಗೂ ಆರ್ಯಭಟ ಪಾರ್ಕ ಅಭಿವೃದ್ಧಿಗೆ ಗಮನ ಕೊಡಲಾಗಿದೆ. ಈಗಾಗಲೇ ಐಟಿ ಪಾರ್ಕ ಗೆ 4 ಕೋಟಿ ಹಣ ಕೊಡಲಾಗಿದೆ.
ವಿಶ್ವವಿದ್ಯಾಲಯದಲ್ಲಿಯು ಸಹ ಐಟಿ ಬೆಳವಣಿಗೆಗೆ ಅವಕಾಶ ಮಾಡಿಕೊಡಲಾಗತ್ತೆ. ಅತಿವೇಗವಾಗಿ ಸೇವೆಯನ್ನು ಸಲ್ಲಿಸುವ ಕಂಪನಿಗಳು ಐಟಿ ಕಂಪನಿಗಳು. ಮತ್ತು ಅತಿ ವೇಗವಾಗಿ ಹೆಚ್ಚು ಕಂಪನಿಗಳು ಬೆಳವಣಿಗೆ ಹೊಂದುತ್ತಿವೆ ಎಂದು ಸಚಿವ ಸಿ.ಎನ್ ಅಶ್ವಥ್ ನಾರಾಯಣ ಹೇಳಿದರು.
ನಗರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಐಟಿ ಕಂಪನಿ ಹಾಗೂ ಸ್ಟಾರ್ಟ್ ಅಪ್ ಗಳಿಗೆ ಎಲ್ಲಾ ಸಮುದಾಯ ಹಾಗೂ ಕರ್ನಾಟಕದ ಎಲ್ಲಾ ಭಾಗಗಳಿಗೂ ಅವಕಾಶ ನೀಡಲಾಗಿದೆ. ಲಕ್ಷಾಂತರ ಯುವಕರಿಗೆ ಕಾಲೇಜ್ ಮಟ್ಟದಲ್ಲಿಯೆ ಕೌಶಲ್ಯದ ಬಗ್ಗೆ ಕಲಿಕೆ ನೀಡಲಾಗ್ತಿದೆ. ಲಕ್ಷಾಂತರ ವಿದ್ಯಾರ್ಥಿಗಳಿಗೆ ಕೌಶಲ್ಯದ ಬಗ್ಗೆ ತರಬೇತಿ ನೀಡಲಾಗ್ತಿದೆ. ಇದು ಪ್ರತಿಭೆಯನ್ನ ಹೆಚ್ಚಿಸಲಿಕ್ಕೆ ಅನುಕೂಲ ಆಗತ್ತೆ. ಸ್ಟಾರ್ಟ್ ಅಪ್ಗಳು 2023 ರ ವರೆಗೆ ಇದು ಹೆಚ್ಚಿನ ಪ್ರಮಾಣದಲ್ಲಿ ವಿಸ್ತರಣೆ ಆಗತ್ತವೆ ಎಂದರು.
ಹುಬ್ಬಳ್ಳಿಯ ಇನ್ಫೋಸಿಸ್ ಬಗ್ಗೆ ಮಾತನಾಡಿದ ಅವರು, ಸದ್ಯ ಕೆಲಸ ಆರಂಭವಾಗಲಿದೆ. ಇನ್ಫೋಸಿಸ್ ಜೊತೆ ಸಭೆ ನಡೆಸಲಾಗಿದೆ. ಈಗಾಗಲೇ ವರ್ಕ್ ಫ್ರಾಮ್ ಹೋಮ್ ಮಾಡುತ್ತಿದ್ದಾರೆ. ಆದಷ್ಟು ಬೇಗ ಹುಬ್ಬಳ್ಳಿ ಇನ್ಫೋಸಿಸ್ ದಲ್ಲಿ ಕೆಲಸ ಆರಂಭ ಮಾಡಲಾಗುತ್ತದೆ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
03/10/2022 06:58 pm