ಕಾಂಗ್ರೆಸ್ ಪಕ್ಷ ನೆಹರೂ ಕಾಲದಿಂದಲೂ ತುಷ್ಠೀಕರಣ ರಾಜಕಾರಣ ಮಾಡಿಕೊಂಡು ಬಂದಿದೆ. ಹೀಗಾಗಿಯೇ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿದೆ. ಉತ್ತರಾಖಂಡದಲ್ಲಿ ಕಾಂಗ್ರೆಸ್ ಪಕ್ಷವನ್ನು ಹುಡುಕಾಡುವ ಪರಿಸ್ಥಿತಿ ಬಂದಿದೆ. ಕಾಂಗ್ರೆಸ್ ಸಂಪೂರ್ಣವಾಗಿ ಸಾಯಬಾರದು. ವಿರೋಧ ಪಕ್ಷ ಇರಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಲೇವಡಿ ಮಾಡಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಫ್‌ಐ ಮತ್ತು ಆರ್‌ಎಸ್‌ಎಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂಬ ಬಿ.ಕೆ.ಹರಿಪ್ರಸಾದ್ ಅವರ ಹೇಳಿಕೆಗೆ ತಿರುಗೇಟು ನೀಡಿದ ಜೋಶಿ, ಇಂದಿರಾ ಗಾಂಧಿ ಕಾಲದಲ್ಲಿ ಕಾಂಗ್ರೆಸ್ ಪರಾಕಾಷ್ಠೆ ತಲುಪಿ, ಸೋನಿಯಾ ಗಾಂಧಿ ಕಾಲದಲ್ಲಿ ತುಷ್ಠೀಕರಣದ ರಾಜಕಾರಣಕ್ಕೆ ಮಾಡುವುದು ಆಕಾಶದ ಮೇಲೆ ದಾಟಿ ಹೋಗಿದೆ. ಇವರ ತುಷ್ಠೀಕರಣದ ರಾಜಕಾರಣ ಇತಿಮಿತಿ ಮೀರಿ ಹೋಗಿದೆ. ಪಿಎಫ್‌ಐ ಬ್ಯಾನ್ ಮಾಡಿರುವುದನ್ನು ಅವರಿಗೆ ವಿರೋಧ ಮಾಡಲು ಆಗುತ್ತಿಲ್ಲ. ವಿರೋಧ ಮಾಡಿದರೆ ಜನ ಸರಿಯಾದ ಬುದ್ಧಿ ಕಲಿಸುತ್ತಾರೆ. ಅದಕ್ಕಾಗಿಯೇ ಆರ್‌ಎಸ್‌ಎಸ್ ಹೆಸರು ತೆಗೆಯುವ ಕೆಲಸ ಮಾಡುತ್ತಿದ್ದಾರೆ ಎಂದರು,
ಹರಿಪ್ರಸಾದ್ ಅವರೇ, ನಿಮ್ಮ ಪಕ್ಷದಲ್ಲಿರುವ ಮನಮೋಹನ್ ಸಿಂಗ್ ಸರ್ಕಾರದಲ್ಲಿ, ಇಂದಿರಾಗಾಂಧಿ ಮತ್ತು ನೆಹರೂ ಸರ್ಕಾರದಲ್ಲಿ ಆರ್‌ಎಸ್‌ಎಸ್‌ನ್ನು ಏನಾದರೂ ಮಾಡಿ ತುಳಿಯುವ ಕೆಲಸ ಮಾಡಿದ್ದರು. ಅದರಲ್ಲಿ ವಿಫಲರಾದ ಪರಿಣಾಮ ಇಂದು ಆರ್‌ಎಸ್‌ಎಸ್ ಶತಮಾನದ ಹಂತಕ್ಕೆ ತಲುಪುತ್ತಿದೆ. ನಾವೆಲ್ಲ ಆರ್‌ಎಸ್‌ಎಸ್‌ನವರು, ದೇಶದ ಪ್ರಮುಖ ಹುದ್ದೆಯಲ್ಲಿರುವವರು ಆರ್‌ಎಸ್‌ಎಸ್‌ನವರು. ನೀವು ಏನು ಹೇಳಿದರೂ ಪ್ರಯೋಜನವಿಲ್ಲ ಎಂದರು. ಇವರೆಲ್ಲ ನಾಟಕ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
01/10/2022 07:42 pm