ಧಾರವಾಡ: ಸುಮಾರು 30-40 ವರ್ಷಗಳಿಂದ ಬಡವರು ಹಾಗೂ ಭೂಮಿ ರಹಿತರು ಅರಣ್ಯವಲ್ಲದ ಭೂಮಿ ಹಾಗೂ ಕಲ್ಲುಭೂಮಿಯನ್ನು ಸಾಗುವಳಿ ಮಾಡುತ್ತ ಬಂದಿದ್ದಾರೆ. ಇದೀಗ ಸರ್ಕಾರ ಸಾಗುವಳಿ ಭೂಮಿಯನ್ನು ಕೈಬಿಡುವಂತೆ ನೋಟಿಸ್ ಕಳುಹಿಸಿದೆ. ಸರ್ಕಾರ ಕೂಡಲೇ ಈ ನೋಟಿಸ್‌ನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ರೈತ ಕೃಷಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ಬಗರ್‌ಹುಕುಂ ಸಾಗುವಳಿದಾರರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸಾಕಷ್ಟು ಜನ ವರ್ಷಗಳಿಂದ ತಮ್ಮ ಜೀವನಾಧಾರಕ್ಕೆ 1 ರಿಂದ 5 ಎಕರೆ ಜಮೀನನ್ನು ಸಾಗುವಳಿ ಮಾಡುತ್ತ ಬಂದಿದ್ದಾರೆ. ಸರ್ಕಾರಗಳು ಇಲ್ಲಿಯವರೆಗೂ ಉಳುಮೆಗೆ ಅವಕಾಶ ನೀಡುತ್ತಾ ಬಂದಿದ್ದರೂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಲು ಅವಶ್ಯಕ ಕ್ರಮ ಕೈಗೊಳ್ಳದಿರುವುದರಿಂದ, ಶಾಸನಬದ್ಧವಾಗಿ ಭೂಮಿಯ ಹಕ್ಕು ದೊರೆತ್ತಿಲ್ಲ. ಈಗ ಏಕಾಏಕಿ ಸಾಗುವಳಿದಾರರಿಗೆ ಸರ್ಕಾರ ನೋಟಿಸ್ ಜಾರಿ ಮಾಡಿದೆ.
ಕೂಡಲೇ ಈ ನೋಟಿಸ್ ವಾಪಸ್ ಪಡೆಯಬೇಕು ಹಾಗೂ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಿ ಬಡ, ರೈತರಿಗೆ ನೆಮ್ಮದಿಯ ಜೀವನವನ್ನು ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಲಾಯಿತು.
Kshetra Samachara
16/09/2022 08:34 pm