ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ರಜತ ಉಳ್ಳಾಗಡ್ಡಿಮಠ ಪೌಂಡೇಶನ್ ವತಿಯಿಂದ;108 ಅರ್ಚರಕರಿಗೆ ಸನ್ಮಾನ

ಹುಬ್ಬಳ್ಳಿ: ರಜತ ಉಳ್ಳಾಗಡ್ಡಿಮಠ ಫೌಂಡೇಶನ್ ವತಿಯಿಂದ ದಿ. ವಿಶ್ವಪ್ರಕಾಶ್ ಉಳ್ಳಾಗಡ್ಡಿಮಠ ಅವರ ಸ್ಮರಣಾರ್ಥ ಹುಬ್ಬಳ್ಳಿಯ ಮೂರುಸಾವಿರಮಠದ ಆವರಣದಲ್ಲಿ 108 ಅರ್ಚಕರು, ಪುರೋಹಿತರಿಗೆ ಸನ್ಮಾನಿಸಲಾಯಿತು.

ಫೌಂಡೇಶನ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ನೇತೃತ್ವದಲ್ಲಿ ಮೂರುಸಾವಿರಮಠದ ಡಾ.ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನೇರವೇರಿದ ಸನ್ಮಾನ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧೆಡೆಯ ಪುರೋಹಿತ, ಅರ್ಚಕರಿಗೆ ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ನಂತರ ಮಾತನಾಡಿದ ಮೂರುಸಾವಿರಮಠದ ಶ್ರೀಗಳು, ರಜತ್ ಉಳ್ಳಾಗಡ್ಡಿಮಠ ಫೌಂಡೇಶನ್ ಕಳೆದ ಒಂದೂವರೆ ವರ್ಷಗಳಿಂದ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬರುತ್ತಿದೆ. ಅದರಂತೆ ಇದೀಗ ಧಾರ್ಮಿಕ ವಿಧಿವಿಧಾನ ಮಾಡುವ ವೈದಿಕರನ್ನು ಗೌರವಿಸಿದ್ದಾರೆ. ವೈದಿಕರು ಆರ್ಥಿಕವಾಗಿ ಅಷ್ಟು ಸಬಲರಾಗಿಲ್ಲ. ಅಂತವರನ್ನು ಪ್ರೋತ್ಸಾಹಿಸುತ್ತಿರುವುದು ಖುಷಿಯ ಸಂಗತಿ ಎಂದರು.

Edited By : Manjunath H D
Kshetra Samachara

Kshetra Samachara

08/09/2022 01:22 pm

Cinque Terre

14.32 K

Cinque Terre

3

ಸಂಬಂಧಿತ ಸುದ್ದಿ