ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಹಂಗರಕಿ ಕೊಲೆ ಪ್ರಕರಣ; ಆರೋಪಿಗಳನ್ನು ಬಂಧಿಸುವಂತೆ ಪ್ರತಿಭಟನೆ

ಧಾರವಾಡ: ಧಾರವಾಡ ತಾಲೂಕಿನ ಹಂಗರಕಿ ಗ್ರಾಮದಲ್ಲಿ ಇತ್ತೀಚೆಗೆ ರಾಮಪ್ಪ ಕೆಳಗಡೆ ಎಂಬ ದಲಿತ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದ್ದು, ಹತ್ಯೆ ನಡೆಸಿದ ಆರೋಪಿಗಳನ್ನು ಬಂಧಿಸದೇ ಪೊಲೀಸರು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಆದಿ ಜಾಂಭವ ಸಂಘದ ಸದಸ್ಯರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

ಹಂಗರಕಿ ಗ್ರಾಮದ ರಾಮಪ್ಪ ಕೆಳಗಡೆ ಎಂಬ ವ್ಯಕ್ತಿಯನ್ನು ಆರೋಪಿಗಳು ಒತ್ತಾಯ ಪೂರ್ವಕವಾಗಿ ಕೊರಳಪಟ್ಟಿ ಹಿಡಿದು ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿ ಕೆಲಸಕ್ಕೆಂದು ಕರೆದುಕೊಂಡು ಹೋಗಿದ್ದರು. ಅಲ್ಲಿ ಆತ ಸಾವನ್ನಪ್ಪುವಂತೆ ಮಾಡಿದ ಆರೋಪಿಗಳು, ಆಸ್ಪತ್ರೆಗೆ ದಾಖಲಿಸದೇ ಆತನ ಮನೆಯವರಿಗೆ ದೂರು ನೀಡದಂತೆ ಬೆದರಿಕೆಯೊಡ್ಡಿ ರಾತ್ರೋರಾತ್ರಿ ರಾಮಪ್ಪನ ಶವವನ್ನು ಸುಟ್ಟು ಹಾಕಿದ್ದಾರೆ.

ಈ ಕುರಿತಂತೆ ಮೇ.18 ರಂದು ದೂರು ದಾಖಲಿಸಲಾಗಿದ್ರೂ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ತಡ ಮಾಡಿದ್ದಾರೆ. ತನಿಖೆಯನ್ನೂ ವಿಳಂಬ ಮಾಡುವುದರೊಂದಿಗೆ ಇನ್ನುಳಿದ ಆರೋಪಿಗಳನ್ನೂ ಬಂಧಿಸದೇ ಅವರು ಬಿಡುಗಡೆಯಾಗಿದ್ದಾರೆ ಎಂದು ಹೇಳುತ್ತಿದ್ದಾರೆ. ಇಲ್ಲಿ ಕಾನೂನು ದುರುಪಯೋಗವಾಗಿದ್ದು, ಕೂಡಲೇ ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಿ ಕೊಲೆ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

Edited By : Manjunath H D
Kshetra Samachara

Kshetra Samachara

05/09/2022 02:47 pm

Cinque Terre

16.88 K

Cinque Terre

0

ಸಂಬಂಧಿತ ಸುದ್ದಿ