ಧಾರವಾಡ: ಧಾರವಾಡದ ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಆರಂಭಗೊಂಡಿದೆ. ಹೆಬ್ಬಳ್ಳಿ ಹಾಗೂ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಶಾಸಕ ಅಮೃತ ದೇಸಾಯಿ ಇಂದು ಜಂಟಿಯಾಗಿ ಚಾಲನೆ ನೀಡಿದರು.
ಧಾರವಾಡ ನಗರದ ಮಾಳಾಪುರ ಲಾಸ್ಟ್ ಬಸ್‌ಸ್ಟಾಪ್ ಬಳಿಯ ತುರುಮರಿ ಗಾರ್ಡನ್ ರಸ್ತೆ ಕಾಮಗಾರಿ, 12.7 ಕೋಟಿ ವೆಚ್ಚದಲ್ಲಿ ಹೆಬ್ಬಳ್ಳಿಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಿಂದ ನಿರ್ಮಿಸಲಾಗುವ 110 ಎಂಎಎ110/11 KV ವಿದ್ಯುತ್ ವಿತರಣೆ ಕೇಂದ್ರಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಶಾಸಕ ಅಮೃತ ದೇಸಾಯಿ ಶಂಕುಸ್ಥಾಪನೆ ನೆರವೇರಿಸಿದರು.
2022-23ನೇ ಸಾಲಿನ ಲೆಕ್ಕ ಶೀರ್ಷಿಕೆ 5054 ಎಸ್.ಎಚ್.ಡಿ.ಪಿ. ಯೋಜನೆಯಡಿ ಒಟ್ಟು 23 ಕೋಟಿ ವೆಚ್ಚದಲ್ಲಿ ಧಾರವಾಡ ತಾಲೂಕಿನ ಜೀರಗಿವಾಡ ಕ್ರಾಸ್‌ನಿಂದ ಉಪ್ಪಿನ ಬೆಟಗೇರಿ ಮುಖಾಂತರ ಹಾರೋಬೆಳವಡಿವರೆಗೆ ರಸ್ತೆ ನಿರ್ಮಾಣ, 2 ಕೋಟಿ ಅನುದಾನದಲ್ಲಿ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಸಿ.ಸಿ. ರಸ್ತೆ ನಿರ್ಮಾಣ, 1.8 ಕೋಟಿ ಅನುದಾನದಲ್ಲಿ ಮರೇವಾಡ-ಉಪ್ಪಿನ ಬೆಟಗೇರಿ ರಸ್ತೆಯ ಆಯ್ದ ಭಾಗಗಳಲ್ಲಿ ರಸ್ತೆ ಸುಧಾರಣೆಗೆ ಚಾಲನೆ ನೀಡಲಾಯಿತು.
ನಂತರ ಉಪ್ಪಿನ ಬೆಟಗೇರಿ ಗ್ರಾಮದ ಹೈಸ್ಕೂಲ್ ಮೈದಾನದಲ್ಲಿ ಬಿಜೆಪಿ ಬಹಿರಂಗ ಸಮಾವೇಶ ನಡೆಯಿತು. ಸಾವಿರಾರು ಜನರು ಪಾಲ್ಗೊಂಡಿದ್ದರು. ಸಮಾವೇಶದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
Kshetra Samachara
03/09/2022 10:35 pm