ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಮುರುಘಾ ಶ್ರೀ ಬೆಂಗಳೂರಿಗೆ ಶಿಫ್ಟ್ ಮಾಡಿದ್ದೇಕೆ ? ಧಾರವಾಡದಲ್ಲಿ ಪ್ರತಿಭಟನೆ

ಧಾರವಾಡ : ಅತ್ಯಾಚಾರ ಆರೋಪ ಹೊತ್ತಿರುವ ಚಿತ್ರದುರ್ಗ ಮುರುಘಾಮಠದ ಮುರುಘಾ ಶರಣರನ್ನು ಬಿಜೆಪಿ ಸರ್ಕಾರ ಬೇಕಂತಲೇ ಬೆಂಗಳೂರಿಗೆ ಶಿಫ್ಟ್ ಮಾಡಿದೆ ಎಂದು ಆರೋಪಿಸಿ ಕರ್ನಾಟಕ ಸಮತಾ ಸೈನಿಕ ದಳದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಮಠದಲ್ಲಿ ವಿದ್ಯಾರ್ಥಿನಿಯರು ಸುರಕ್ಷತೆಯಿಂದ ವಿದ್ಯಾಭ್ಯಾಸ ಮಾಡುತ್ತಾರೆ ಎಂದು ಅಲ್ಲಿ ಬಿಡಲಾಗಿರುತ್ತದೆ. ಆದರೆ, ಮಠದ ಶ್ರೀಗಳೇ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದು, ಅಕ್ಷಮ್ಯ ಅಪರಾಧ. ಚಿತ್ರದುರ್ಗದ ಈ ಹೀನ ಕೃತ್ಯದಲ್ಲಿ ತೊಡಗಿದ ಎಲ್ಲಾ ಆರೋಪಿಗಳನ್ನು ಕೂಡಲೇ ಪತ್ತೆ ಮಾಡಬೇಕು. ಚಿತ್ರದುರ್ಗದಲ್ಲಿ ಎಲ್ಲಾ ಸೌಕರ್ಯಗಳಿದ್ದರೂ ಸ್ವಾಮೀಜಿಯನ್ನು ರಕ್ಷಣೆ ಮಾಡುವ ಉದ್ದೇಶಕ್ಕೋಸ್ಕರ ಉದ್ದೇಶಪೂರ್ವಕವಾಗಿಯೇ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ ಎಂದು ಲಕ್ಷ್ಮಣ ಬಕ್ಕಾಯಿ ಆರೋಪಿಸಿದರು.

ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವ ಮೂಲಕ ಚಿತ್ರದುರ್ಗದ ಸ್ವಾಮೀಜಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ, ಆರೋಪಿಗಳನ್ನು ತಕ್ಕ ಶಿಕ್ಷೆಗೆ ಗುರಿ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

Edited By : Manjunath H D
Kshetra Samachara

Kshetra Samachara

02/09/2022 02:24 pm

Cinque Terre

17.2 K

Cinque Terre

0

ಸಂಬಂಧಿತ ಸುದ್ದಿ