ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಮಾಡಿದ ಹೊರಟ್ಟಿ; ಮಾಜಿ ಸಭಾಪತಿಯ ಸಾಧನೆಗೆ ಗೌರವದ ಗರಿ

ಹುಬ್ಬಳ್ಳಿ: ಅವರು ಸುಮಾರು ನಾಲ್ಕು ದಶಕದ ಯಶಸ್ವಿ ರಾಜಕಾರಣಿ. ಕೃಷಿಕರಾಗಿ, ಶಿಕ್ಷಕರಾಗಿ, ರಾಜಕಾರಣಿಯಾಗಿ ತನ್ನ ಜವಾಬ್ದಾರಿಯನ್ನು ನಿಭಾಯಿಸುವ ಮೂಲಕ ಈಗ ದಾಖಲೆಯನ್ನು ಬರೆದಿದ್ದಾರೆ. ಲಂಡನ್‌ನ ವರ್ಲ್ಡ ಬುಕ್‌ ಆಫ್ ರೆಕಾರ್ಡ್‌ಗೆ ಭಾಜನರಾಗಿದ್ದಾರೆ. ಅಷ್ಟಕ್ಕೂ ಯಾರು ಅದು ಅಂತೀರಾ ಅವರೇ ನಮ್ಮ ಹುಬ್ಬಳ್ಳಿಯ ರಾಜಕಾರಣಿ.

ಹೌದು. ಕಳೆದ ಐದು ದಶಕಗಳಿಂದ ಶೈಕ್ಷಣಿಕ ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿ ಹಲವಾರು ವಿಧಾಯಕ ಸೇವೆಗಳನ್ನು ಸಲ್ಲಿಸುವ ಮೂಲಕ ಬಸವರಾಜ ಹೊರಟ್ಟಿಯವರ ಹೆಸರು ಕನ್ನಡ ನಾಡಿಗೆ ಚಿರ ಪರಿಚಿತ ವಿಧಾನ ಪರಿಷತ್ತಿಗೆ ಸತತ 8 ಬಾರಿ ಆಯ್ಕೆಯಾಗುವ ಮೂಲಕ ಐತಿಹಾಸಿಕ ದಾಖಲೆ ಮಾಡಿದ ಮೇಲ್ಮನೆ ಹಿರಿಯ ಸದಸ್ಯರಾದ ಬಸವರಾಜ ಹೊರಟ್ಟಿ ಅವರಿಗೆ ಲಂಡನ್‌ನ ವರ್ಲ್ಡ್‌ ಬುಕ್ ಆಫ್ ರಿಕಾರ್ಡ್ ಸಂಸ್ಥೆಯವರು ದಾಖಲೆಯ ದೃಢೀಕರಣ ಪ್ರಮಾಣಪತ್ರ ನೀಡಿದ್ದಾರೆ.

1980 ರಿಂದ ವಿಧಾನ ಪರಿಷತ್ತಿಗೆ ಒಂದೇ ಕ್ಷೇತ್ರದಿಂದ ಸತತ 8 ಬಾರಿ ಆಯ್ಕೆಯಾಗುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. ಸಾಮಾನ್ಯ ಶಿಕ್ಷಕರಾದ ಹೊರಟ್ಟಿಯವರು ಶಿಕ್ಷಣ ಸಚಿವರಾಗಿ, ವಿವಿಧ ಖಾತೆಗಳ ಸಚಿವರಾಗಿ ಎರಡು ಬಾರಿ ಸಭಾಪತಿಯಾಗಿ ಸೇವೆ ಸಲ್ಲಿಸಿದ್ದು ಶಿಕ್ಷಣ ಕ್ಷೇತ್ರಕ್ಕೆ ಶಿಕ್ಷಣ ವಲಯಕ್ಕೆ ಅಭಿಮಾನದ ಸಂಗತಿ, ಸಾರ್ವಜನಿಕವಾಗಿ ಅವರು ಮಾಡಿದ ಅಪ್ರತಿಮ ಸೇವೆ ಕಳೆದ 5 ದಶಕಗಳಿಂದ ಶಿಕ್ಷಕರ ಹಿತಕ್ಕಾಗಿ ಹೋರಾಟ ಮಾಡುತ್ತಾ ಬರುವ ಮೂಲಕ ಹೋರಾಟದ ಹೊರಟ್ಟಿ ಎಂದೇ ನಾಡಿಗೆ ಚಿರಪರಿಚಿತರಾದವರು. ಶೈಕ್ಷಣಿಕ ಸೇವೆಯಲ್ಲಿ ಅವರು ಮಾಡಿದ ಹೆಗ್ಗುರುತುಗಳು ನಿತ್ಯ ಶಿಕ್ಷಕ ವಲಯ ಮೆಲಕು ಹಾಕುತ್ತಿದೆ. ಶಿಕ್ಷಕರ ಹೊಟ್ಟೆ ಮತ್ತು ರಟ್ಟೆಗಟ್ಟಿಗೊಳಿಸಿದ ಹೊರಟ್ಟಿಯವರೆಂದೇ ನಾಡಿಗೆ ಚಿರಪರಿಚಿತರಾಗಿದ್ದಾರೆ.

ಲಂಡನ್ನಿನ ವರ್ಲ್ಡ ಬುಕ್ ಆಫ್ ರೆಕಾರ್ಡ ಸಂಸ್ಥೆಯವರು ಹೊರಟ್ಟಿಯವರು ಜಾಗತಿಕ ಶಾಂತಿಗಾಗಿ ಅವರು ಸಲ್ಲಿಸಿದ ಮಾನವೀಯ ಸೇವೆಗಾಗಿ ಅವರ ವ್ಯಕ್ತಿತ್ವದ ಇತರೆ ಮಜಲುಗಳನ್ನು, ಸಾಧನೆಗಳನ್ನು ಹಾಗೂ ಮೇಲ್ಮನೆಗೆ ಸತತ 8 ಬಾರಿ ಆಯ್ಕೆಯಾಗುವ ಮೂಲಕ ಶಿಕ್ಷಕರ ಮತ್ತು ಹೊರಟ್ಟಿಯವರ ಅವಿನಾಭಾವ ಸಂಬಂಧದ ಕುರಿತು ಅಧ್ಯಯನ ಮಾಡಿ ಒಬ್ಬ ಮೇರು ಸಾಧಕ ಎಂದು ವರ್ಲ್ಡಬುಕ್ ಆಫ್ ರಿಕಾರ್ಡ ಸಂಸ್ಥೆಯವರು ಹೊರಟ್ಟಿಯವರ ದಾಖಲೆಗಳನ್ನು ದಾಖಲೀಕರಿಸಿ ಸಂಖ್ಯೆ: 198/2022 ದಿನಾಂಕ:29-08-2022 ರಂದು ದೃಢೀಕರಣ ಪ್ರಮಾಣ ಪತ್ರ ನೀಡಿ ಗೌರವಿಸಿದ್ದಾರೆ.

Edited By : Vijay Kumar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

02/09/2022 12:37 pm

Cinque Terre

19.49 K

Cinque Terre

2

ಸಂಬಂಧಿತ ಸುದ್ದಿ