ಧಾರವಾಡ: ಗಣೇಶ ಹಬ್ಬದ ಡಿಜೆ ನಿರ್ಬಂಧ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರತಿಕ್ರಿಯಿಸಿದ್ದಾರೆ. ಡಿಜೆ ಅನುಮತಿ ಪಡೆಯೋದಿಲ್ಲ ಎಂಬ ಮುತಾಲಿಕ್ ಹೇಳಿಕೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಡಿಜೆ ಬಗ್ಗೆ ಯಾರು ಏನೇ ಹೇಳಿರಲಿ ಅದರ ಬಗ್ಗೆ ನಾನು ಪ್ರತಿಕ್ರಿಯೆ ನೀಡಲಾರೆ ಎಂದಿದ್ದಾರೆ.
ಪೊಲೀಸರು ಡಿಜೆ ಬಗ್ಗೆ ಮನವಿ ಮಾಡಿಕೊಂಡಿದ್ದಾರೆ. ಆ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ ಅಂತಲ್ಲ. ಸುಪ್ರೀಂಕೋರ್ಟ್ ಮಾರ್ಗಸೂಚಿ ಹಿನ್ನೆಲೆ ಮನವಿ ಮಾಡಿಕೊಂಡಿದ್ದಾರೆ. ಇತಿ ಮಿತಿಯಲ್ಲಿ ಹಬ್ಬ ಮಾಡಿ ಅಂತಾ ಪೊಲೀಸರು ಹೇಳಿದ್ದಾರೆ. ಇದಕ್ಕೆ ಪರಿಹಾರದ ದಾರಿ ಇದೆಯಾ ನೋಡುತ್ತೇವೆ ಎಂದು ಜೋಶಿ ಹೇಳಿದ್ದಾರೆ.
ಶಾಂತಿ ಸೌಹಾರ್ಧತೆಯಿಂದ ಹಬ್ಬ ಮಾಡಬೇಕಿದೆ. ಮೂರು ವರ್ಷದ ಬಳಿಕ ಹಬ್ಬಕ್ಕೆ ಅವಕಾಶ ಸಿಕ್ಕಿದೆ. ಹೀಗಾಗಿ ಶಾಂತಿ, ಸೌಹಾರ್ಧತೆಯಿಂದ ಹಬ್ಬ ಮಾಡಬೇಕಾಗಿದೆ. ಇದಕ್ಕೆ ಸಂಬಂಧಿಸಿದವರೊಂದಿಗೆ ಸಭೆ ಮಾಡುತ್ತೇವೆ ಈ ಸಮಸ್ಯೆಗೆ ಒಂದು ಪರಿಹಾರ ಹುಡುಕುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.
Kshetra Samachara
28/08/2022 08:06 pm