ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ ಮತ ಕ್ಷೇತ್ರದಲ್ಲಿ ಇತಿಹಾಸ ನಿರ್ಮಿಸಲಿರುವ ರಾಷ್ಟ್ರ ಧ್ವಜ.

ಅಳ್ನಾವರ:ಅದೆಷ್ಟೋ ದೇಶ ಭಕ್ತರ ಪ್ರಾಣ ತ್ಯಾಗ,ಬಲಿದಾನದಿಂದ ನಮಗೆ ಸಿಕ್ಕಿರುವ ಸ್ವಾತಂತ್ರ್ಯ ದ ಬಗ್ಗೆ ಯುವ ಜನರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಹಾಗೂ 75ನೆ ಅಮೃತ ಮಹೋತ್ಸವದ ಅಂಗವಾಗಿ 9ಕಿ.ಮೀ ಉದ್ದ ಹಾಗೂ 9 ಅಡಿ ಅಗಲದ ತ್ರಿವರ್ಣ ಧ್ವಜದ ಮೆರವಣಿಗೆಯನ್ನು ಕಲಘಟಗಿಯಲ್ಲಿ ಆಗಸ್ಟ್ 15ರಂದು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಸಂತೋಷ್ ಲಾಡ್ ತಿಳಿಸಿದರು.

ಪಟ್ಟಣದ ಪ್ರಾವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿ ಮತ ಕ್ಷೇತ್ರದಲ್ಲಿ 75 ಕಿ.ಮೀ ಪಾದಯಾತ್ರೆ ಹಮ್ಮಿಕೊಂಡಿದ್ದು ಕಲಘಟಗಿ ಮತ ಕ್ಷೇತ್ರದಲ್ಲಿಯೂ ಈಗಾಗಲೇ 12 ಗ್ರಾಮಗಳಲ್ಲಿ ಪಾದಯಾತ್ರೆ ನಡೆಸಲಾಗಿದೆ ಎಂದರು.ದೇಶದ ಅಖಂಡತೆಯನ್ನು ಎತ್ತಿ ಹಿಡಿಯುವ ಸದುದ್ದೇಶದಿಂದ ಎಸ್,ಲಾಡ್ ಪೌಂಡೇಶನ್ ವತಿಯಿಂದ ರಾಷ್ಟ್ರ ಜಾಗೃತಿ ಅಭಿಯಾನ ದಿಂದ ನಾಲ್ಕು ಅಭಿಯಾನವನ್ನು ಹಮ್ಮಿಕೊಂಡಿದ್ದು ಪ್ರತಿಯೊಂದು ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ,ಸಣ್ಣ ರೈತರಿಗೆ ಹೆಲ್ಪ್ ಕಾರ್ಡ್,ಆನ್ ಲೈನ್ ಬೆಟ್ಟಿಂಗ್ ಸ್ಥಗಿತ,ಮುಖ್ಯವಾಗಿ ದೇಶದಲ್ಲಿ ಡ್ರಗ್ಸ್ ಮಾಫಿಯಾ ಸಂಪೂರ್ಣವಾಗಿ ನಿಲ್ಲಿಸುವಂತೆ ಸರ್ಕಾರಕ್ಕೆ ಒತ್ತಾಯಿಸುವ ಕಾರ್ಯ ನಡೆದಿದೆ.ಇದಕ್ಕೆ ಎಲ್ಲಾ ಪಕ್ಷದವರು ಸಹಕಾರ ನೀಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಅರ್ಜುನ್ ಪಾಟೀಲ್ ಹಾಗೂ ಮಂಜುನಾಥ ಮುದಕವಿ ಅವರು ಬಿ.ಜೆ.ಪಿ ಯಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಕರಿಗೌಡರ್,ಮಲ್ಲಣಗೌಡ ಪಾಟೀಲ್,ಹಸನ್ ಅಲಿ ಶೇಖ್,ಸುವರ್ಣ ಕಡಕೊಳ, ರಮೇಶ ಕುನ್ನೂರಕರ, ನಿಂಗಪ್ಪ ಬೆಕ್ವಾಡಕರ್, ಸತ್ತಾರ ಭಾತಕಂಡೆ, ಶ್ರೀಕಾಂತ ಗಾಯಕ್ವಾಡ, ಮಂಜುನಾಥ ಕೋಗಿಲಗೇರಿ, ಮಧು ಬಡಸ್ಕರ, ರಾಯಪ್ಪ ಹುಡೇದ ಮತ್ತೀತರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

10/08/2022 11:09 am

Cinque Terre

5.77 K

Cinque Terre

0

ಸಂಬಂಧಿತ ಸುದ್ದಿ