ಅಣ್ಣಿಗೇರಿ: ತಾಲೂಕಿನಾದ್ಯಂತ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆರಾಯನ ಆರ್ಭಟದಿಂದ ರೈತರ ಜಮೀನುಗಳಲ್ಲಿ ಬೆಳೆದ ಬೆಳೆಗಳು ಸಂಪೂರ್ಣವಾಗಿ ಹಾಳಾಗಿವೆ. ಹಾನಿಗೊಳಗಾದ ಬೆಳೆಗಳಿಗೆ ಶೀಘ್ರ ಪರಿಹಾರ ನೀಡಬೇಕು ಎಂದು ತಾಲೂಕು ಜೆಡಿಎಸ್ ಪ್ರತಿಭಟನೆ ಮಾಡಿ ತಾಲೂಕು ದಂಡಾಧಿಕಾರಿ ಅವರಿಗೆ ಮನವಿ ಸಲ್ಲಿಸುವುದರ ಮುಖಾಂತರ ಸರ್ಕಾರಕ್ಕೆ ಒತ್ತಾಯಿಸಿತು.
ಈ ವೇಳೆ ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಅಂಗಡಿ ಮಾತನಾಡಿ, ತಾಲೂಕಿನಲ್ಲಿ ಅತಿವೃಷ್ಟಿ ಮಳೆಯಾಗಿ ಹಾನಿಗೊಳಗಾದ ಬೆಳೆಗಳಿಗೆ ಶೀಘ್ರದಲ್ಲೇ ಪರಿಹಾರ ನೀಡಬೇಕು. ಅಲ್ಲದೆ ಈ ಹಿಂದೆಯೂ ಸರ್ಕಾರ ಪರಿಹಾರ ನೀಡುವಲ್ಲಿ ನಿರ್ಲಕ್ಷಿಸಿರುವುದನ್ನು ಜೆಡಿಎಸ್ ಖಂಡಿಸುತ್ತದೆ. ಅತಿವೃಷ್ಟಿಯಿಂದ ರೈತರು ಬೆಳೆ ಬೆಳೆಯುವುದಕ್ಕೆ ಸಾವಿರಾರು ರೂಪಾಯಿಗಳು ಖರ್ಚು ಮಾಡಿದ್ದಾರೆ. ಮಾಡಿದ ಖರ್ಚು ಸಹ ಮರಳಿ ಬಾರದ ಸ್ಥಿತಿಯಲ್ಲಿ ರೈತರಿದ್ದಾರೆ. ಆದಕಾರಣ ಸರ್ಕಾರ ತಕ್ಷಣವೇ ಪರಿಹಾರ ನೀಡಬೇಕು. ಹಾನಿಗೊಳಗಾದ ಹೆಸರಿನ ಬೆಳೆಗೆ ಪ್ರತಿ ಎಕರೆಗೆ 25 ಸಾವಿರ ರೂಪಾಯಿಯಂತೆ ನೀಡಬೇಕು ಮತ್ತು ಹೆಸರು ಬೆಳೆ ವಿಮೆ ತುಂಬಿಸಿಕೊಳ್ಳುವ ಅವಧಿ ಮುಗಿದಿರುವುದರಿಂದ ಕೂಡಲೇ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಈ ಸಂಧರ್ಭದಲ್ಲಿ ವೀರಭದ್ರಪ್ಪ ಅಂಗಡಿ, ನಿಂಗಪ್ಪ ಬಡ್ಡೇಪ್ಪನವರ, ಬಸವರಾಜ ಹಾದಿಮನಿ, ಯೋಗಿಶ ಚಲವಾದಿ, ದಸ್ತಗೀರಸಾಬ ಸಂಗಟಿ, ಬುಡ್ಡಾ ಗಾಡಗೋಳಿ, ಅಶೋಕರಡ್ಡಿ ಕೀರೆಸೂರ, ಭೀಮರಡ್ಡಿ ಕಿರೇಸೂರ, ಬಸನಗೌಡ ಕಲ್ಲನಗೌಡ್ರ, ಗುರಸಿದಪ್ಪ ಕೊಪ್ಪದ, ಎಮ್ ಆರ್ ಕಾಶಿಮಖಾನವರ, ವೀರಭದ್ರಪ್ಪ ಕುಬಸದ ಉಪಸ್ಥಿತರಿದ್ದರು.
Kshetra Samachara
08/08/2022 07:31 pm