ಹುಬ್ಬಳ್ಳಿ: ಪ್ರತಿಯೊಬ್ಬ ಭಾರತೀಯನಿಗೂ ದೇಶಪ್ರೇಮ ಇದ್ದೇ ಇರುತ್ತದೆ. ಆದರೆ ಹುಬ್ಬಳ್ಳಿಯ ಕಾಂಗ್ರೆಸ್ ಕಾರ್ಯಕರ್ತ ರಜತ್ ಉಳ್ಳಾಗಡ್ಡಿಮಠ ಅವರಿಗೆ ದೇಶದ ಬಗ್ಗೆ ಮಾತ್ರವಲ್ಲದೆ ದೇಶಿಯ ಉತ್ಪನ್ನ, ದೇಶಿಯ ಸಂಸ್ಕೃತಿ ಹಾಗೂ ಸಂಪ್ರದಾಯದ ಬಗ್ಗೆ ನಿಜಕ್ಕೂ ಹೆಚ್ಚಿನ ಕಾಳಜಿಯೇ ಇದೆ. ರಾಷ್ಟ್ರ ಧ್ವಜಕ್ಕಾಗಿ ಹಾಗೂ ಖಾದಿ ಗ್ರಾಮೋದ್ಯೋಗ ಉಳಿವಿಗಾಗಿ ಹಗಲಿರುಳು ಹೋರಾಟ ನಡೆಸುತ್ತಿದ್ದಾರೆ. ಪಾಲಿಸ್ಟರ್ ಮುಕ್ತ ರಾಷ್ಟ್ರ ಧ್ವಜ ಬಳಕೆಗೆ ಹೋರಾಟ ನಡೆಸಿದ್ದು, ಈಗ ಸಾಮಾನ್ಯ ಕಾರ್ಯಕರ್ತನ ಕೂಗು ದೆಹಲಿಯನ್ನು ತಲುಪಿದೆ.
ಹೌದು.. ಹುಬ್ಬಳ್ಳಿಯ ಕಾಂಗ್ರೆಸ್ ಕಾರ್ಯಕರ್ತ ರಜತ್ ಉಳ್ಳಾಗಡ್ಡಿಮಠ ಅವರು ಸುಮಾರು ವರ್ಷಗಳಿಂದ ಸಾರ್ವಜನಿಕ ಸೇವೆಯಲ್ಲಿ ಸಕ್ರೀಯರಾಗಿ ಕಾರ್ಯನಿರ್ವಹಿಸುವ ಮೂಲಕ ಸಾಕಷ್ಟು ಜನಮನ್ನಣೆ ಪಡೆದಿದ್ದಾರೆ. ಯಾವುದೇ ಸಾರ್ವಜನಿಕ ಕೆಲಸವಿದ್ದರೂ ಮುಂಚೂಣಿಯಲ್ಲಿರುವ ರಜತ್ ಜನರ ಸಮಸ್ಯೆಗೆ ಧ್ವನಿಯಾಗಿ ಸೇವೆ ಸಲ್ಲಿಸಿದ್ದಾರೆ. ಈಗ ಮತ್ತೇ ಹೋರಾಟದ ಮುಂದುವರಿದ ಭಾಗದಂತೆ ಭಾರತದ ಪರಂಪರೆಯನ್ನು ಉಳಿಸುವ ಕಾರ್ಯಕ್ಕೆ ಮುಂದಾಗಿದ್ದು, ಹೋರಾಟದ ಮೂಲಕವೇ ದೇಶಿಯ ಪರಂಪರೆಗೆ ನ್ಯಾಯ ಒದಗಿಸಲು ಮುಂದಾಗಿದ್ದಾರೆ. ಕೇಂದ್ರ ಸರ್ಕಾರದ ಚೀನಾ ಪಾಲಿಸ್ಟರ್ ಧ್ವಜ ಆಮದು ಮಾಡಿಕೊಂಡು ಬಳಕೆಗೆ ಮುಂದಾಗಿದ್ದು, ಇಂತಹ ತೀರ್ಮಾನವನ್ನು ಬಹಿಷ್ಕಾರ ಮಾಡಿ ಸ್ವದೇಶಿಯ ಖಾದಿ ಮೂಲಕವೇ ರಾಷ್ಟ್ರದಲ್ಲಿ ತಿರಂಗಾ ಧ್ವಜವನ್ನು ಹಾರಾಡುವಂತೆ ಮಾಡಲು ಹೋರಾಟಕ್ಕೆ ಇಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಶ್ರಮವಹಿಸಿ ಶಾಲಾ ಕಾಲೇಜು, ಮಠಗಳು, ಸಂಘ ಸಂಸ್ಥೆಗಳು ಹಾಗೂ ಮನೆ ಮನೆಗೆ ಹೋಗಿ ಚೀನಾದ ಪಾಲಿಸ್ಟರ್ ಬಳಕೆ ನಿಷೇಧದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಇವರ ಹೋರಾಟದ ಕೂಗು ದೆಹಲಿಯನ್ನು ತಲುಪಿದೆ.
ಹುಬ್ಬಳ್ಳಿಯ ಬೆಂಗೇರಿ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ಸತ್ಯಾಗ್ರಹದಂತಹ ಹೋರಾಟದ ಮೂಲಕ ಕೇಂದ್ರ ಸರ್ಕಾರದ ಕಣ್ಣು ತೆರೆಸಲು ಮುಂದಾಗಿದ್ದಾರೆ. ಈಗಾಗಲೇ ರಾಜ್ಯ ಕಾಂಗ್ರೆಸ್ ನಾಯಕರಾದ ಡಿ.ಕೆ.ಶಿವಕುಮಾರ್, ಬಿ.ಕೆ.ಹರಿಪ್ರಸಾದ, ಮಹಮ್ಮದ್ ನಲ್ಪಾಡ್, ಸತೀಶ ಜಾರಕಿಹೊಳಿ, ಉಮಾಶ್ರೀ ಸೇರಿದಂತೆ ಸಾಕಷ್ಟು ನಾಯಕರನ್ನು ಕರೆಸಿ ಹೋರಾಟ ಮಾಡುವ ಮೂಲಕ ದೇಶಿಯ ಪರಂಪರೆ ಉಳಿವಿಗಾಗಿ ಹೋರಾಟ ನಡೆಸಿದ್ದಾರೆ.
ಇನ್ನೂ ಚರಕದ ಮೂಲಕ ನೂಲನ್ನು ತೆಗೆದು ಬಟ್ಟೆಯನ್ನು ತೆಗೆಯುವ ದೇಶಿಯ ಕಾಯಕವನ್ನು ಬೆಳೆಯುವ ಸಿರಿ ಮೊಳೆಕೆಯಲ್ಲಿ ಎಂಬ ವಿದ್ಯಾರ್ಥಿಗಳಿಗೆ ಉಣಬಡಿಸುವ ಮೂಲಕ ಮಹಾತ್ಮ ಗಾಂಧಿಯವರ ಕನಸಿನ ಸಸಿಗೆ ನೀರುಣಿಸುವ ಕಾರ್ಯಕ್ಕೆ ರಜತ್ ಉಳ್ಳಾಗಡ್ಡಿಮಠ ಮುಂದಾಗಿದ್ದಾರೆ. ರಜತ್ ಅವರ ಕಾರ್ಯಕ್ಕೆ ಎಲ್ಲೆಡೆಯೂ ಪ್ರಶಂಸೆ ವ್ಯಕ್ತವಾಗುತ್ತಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
31/07/2022 10:13 am