ಹುಬ್ಬಳ್ಳಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮೇಲೆ ಇ.ಡಿ ವಿಚಾರಣೆ ಖಂಡಿಸಿ, ನಿನ್ನೆ ಹುಬ್ಬಳ್ಳಿಯಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡ ಈ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಹವಾ ಕ್ರಿಯೇಟ್ ಮಾಡುವ ಭರದಲ್ಲಿ ಕಾರ್ಯಕರ್ತರು ರಸ್ತೆ ಮೇಲೆ ವಾಹನ ಸವಾರರಿಗೆ ತಲೆಗೆ ತಾಕುವಂತೆ ಬಂಟಿಂಗ್ಸ್ಗಳನ್ನು ಕಟ್ಟಿದ್ದಾರೆ. ಇನ್ನು ಪ್ರತಿಭಟನೆ ನಂತರ ಅವುಗಳನ್ನು ತೆಗೆಯದ ಕಾರಣ, ಸವಾರರಿಗೆ ಕಿರಿಕಿರಿ ಉಂಟುಮಾಡಿದ್ದು, ಅಲ್ಲಲ್ಲಿ ಬಂಟಿಂಗ್ಸ್ಗಳು ತುಂಡಾಗಿ ಬಿದ್ದಿವೆ.
ಬಂಟಿಂಗ್ಸ್ಗಳು ಸವಾರರ ಪ್ರಾಣಕ್ಕೆ ಕುತ್ತಾಗುವ ಮುನ್ನ ಕಾರ್ಯಕರ್ತರು ಅಥವಾ ಪಾಲಿಕೆ ಸಿಬ್ಬಂದಿ ಇವುಗಳನ್ನು ತೆರವುಗೊಳಿಸಬೇಕು ಎಂದು ಜನ ಒತ್ತಾಯಿಸಿದ್ದಾರೆ.
Kshetra Samachara
23/07/2022 01:42 pm