ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸರ್ಕಾರದ ನಡೆ ಸರಿಯಾಗಿರಲಿಲ್ಲ ಎಂದ ಆಮ್ ಆದ್ಮಿ ಪಕ್ಷದ ಮುಖಂಡ

ಧಾರವಾಡ: ಸರ್ಕಾರಿ ಕಚೇರಿಗಳಲ್ಲಿ ವೀಡಿಯೋ ಹಾಗೂ ಫೋಟೋ ತೆಗೆಯಬಾರದು ಎಂದು ಆದೇಶ ಹೊರಡಿಸಿದ್ದ ಸರ್ಕಾರದ ಆದೇಶ ಸರಿಯಾಗಿರಲಿಲ್ಲ. ಇದರ ವಿರುದ್ಧ ರಸ್ತೆಗಿಳಿಯಬೇಕು ಎನ್ನುವಷ್ಟರಲ್ಲಿ ಮತ್ತೆ ಆ ಆದೇಶವನ್ನು ವಾಪಸ್ ಪಡೆದಿದೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಮಂಜುನಾಥ ಜಕ್ಕಣ್ಣವರ ಹೇಳಿದ್ದಾರೆ.

ಧಾರವಾಡದಲ್ಲಿ ಮಾತನಾಡಿದ ಅವರು, ಸರ್ಕಾರಿ ಕಚೇರಿಗಳಲ್ಲಿ ನಡೆಯುವ ಭ್ರಷ್ಟಾಚಾರಗಳನ್ನು ಮುಚ್ಚಿಡಲು ಸರ್ಕಾರ ಈ ಆದೇಶ ಹೊರಡಿಸಿತ್ತಾ? ನೀವು ತಿನ್ನಿ ನಮಗೂ ಪಾಲು ಕೊಡಿ ಎಂಬುದು ಸರ್ಕಾರದ ಉದ್ದೇಶವಾಗಿತ್ತಾ ನಮಗೆ ಗೊತ್ತಾಗಲಿಲ್ಲ. ವೀಡಿಯೋ, ಫೋಟೋ ಮಾಡಬೇಡಿ ಎನ್ನುವುದಾದರೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಹೊರಗಡೆ ಸಾರ್ವಜನಿಕರಿಗೆ ಗೊತ್ತಾಗುವಂತೆ ದೊಡ್ಡ ಟಿವಿ ಪರದೆ ಹಾಕಬೇಕಿತ್ತು. ಇದೊಂದು ಲಜ್ಜೆಗಟ್ಟ ಸರ್ಕಾರ ತಾನು ಮಾಡಿದ ತಪ್ಪನ್ನು ಮಧ್ಯರಾತ್ರಿ ತಿದ್ದಿಕೊಂಡಿದೆ ಎಂದಿದ್ದಾರೆ.

Edited By : Shivu K
Kshetra Samachara

Kshetra Samachara

16/07/2022 06:12 pm

Cinque Terre

34.11 K

Cinque Terre

3

ಸಂಬಂಧಿತ ಸುದ್ದಿ