ನವಲಗುಂದ: ತಾಲೂಕಿನ ಬೇಡ ಜಂಗಮ ಸಮಾಜದ ವತಿಯಿಂದ ಬುಧವಾರ ಪಟ್ಟಣದಲ್ಲಿ ಪಾದಯಾತ್ರೆ ಮೂಲಕ ತಹಶೀಲ್ದಾರ್ ಕಚೇರಿಯವರೆಗೆ ಆಗಮಿಸಿ, ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.
ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ರಾಜ್ಯಾಧ್ಯಕ್ಷರಾದ ಐ.ಡಿ ಹಿರೇಮಠ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಮೂಲಕ ಮುಖ್ಯ ಮಂತ್ರಿಗಳ ಮನೆಗೆ ಮನವಿ ಸಲ್ಲಿಸಲು ಹೋಗುವ ಸಮಯದಲ್ಲಿ ಪೋಲೀಸರು ಅವರನ್ನು ಬಂಧಿಸಿದ್ರು. ಈ ಕಾರಣ ಇಂದು ಘಟನೆ ವಿರೋಧಿಸಿ, ಒಂದು ದಿನದ ಪ್ರತಿಭಟನೆಯನ್ನು ಪಾದಯಾತ್ರೆಯ ಮೂಲಕ ಹಮ್ಮಿಕೊಳ್ಳಲಾಗಿತ್ತು.
ನವಲಗುಂದ ತಾಲೂಕಿನ ಬೇಡಜಂಗಮರ ಸಮಸ್ಯೆಗಳಿಗೆ ರಾಜ್ಯ ಸರ್ಕಾರ ಸ್ಪಂದಿಸಬೇಕು ಎಂದು ಪ್ರತಿಭಟನೆಯಲ್ಲಿ ಆಗ್ರಹಿಸಲಾಯಿತು.
Kshetra Samachara
06/07/2022 04:42 pm