ಧಾರವಾಡ: ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕ ಆಗಬೇಕು ಹಾಗೂ ಅಲ್ಲಿ ಶಾಸ್ತ್ರೋಕ್ತವಾಗಿ ಪೂಜೆ- ಪುನಸ್ಕಾರ ನಡೆಯಬೇಕು ಎಂಬ ಬೇಡಿಕೆಗೆ ಕ್ಯಾಬಿನೆಟ್ ಸಭೆ ಸ್ಪಂದಿಸಿ ನಿರ್ಣಯ ಕೈಗೊಂಡಿದ್ದು ಸ್ವಾಗತಾರ್ಹ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.
ದತ್ತಪೀಠದಲ್ಲಿ ತ್ರಿಕಾಲ ಪೂಜೆ ಆಗಬೇಕು, ಅನಾಥವಾಗಿ ಬಿದ್ದಿದ್ದ ದತ್ತಾತ್ರೇಯ ಪೀಠದ ಪಾದುಕೆ ಪೂಜೆ ಆಗಬೇಕು ಎಂಬ ಬೇಡಿಕೆ ನಮ್ಮದಾಗಿತ್ತು. ನಿನ್ನೆ ಅದಕ್ಕಾಗಿ ನಿರ್ಣಯ ತೆಗೆದುಕೊಂಡಿದ್ದು ಸ್ವಾಗತಾರ್ಹ ಎಂದಿದ್ದಾರೆ.
ನಿರಂತರ ತ್ರಿಕಾಲ ಪೂಜೆ ಆದರೆ ಸರ್ವರಿಗೆ ಶಾಂತಿ- ಸಮಾಧಾನ, ಅಭಿವೃದ್ಧಿ ಸಿಗಲಿದೆ ಎಂಬ ನಂಬಿಕೆ ಇದೆ. ಇಲ್ಲಿವರೆಗೆ ಆಗದೇ ಇರುವ ತ್ರಿಕಾಲ ಪೂಜೆ ಸರ್ಕಾರ ತೆಗೆದುಕೊಂಡ ನಿರ್ಣಯದಿಂದ ಆಗಬೇಕು. ಮುಸ್ಲಿಂ ಮುಜಾವರ್ ಅಲ್ಲಿ ಮತ್ತೆ ಬಂದು ಅಪವಿತ್ರ ಮಾಡುವುದು ಬೇಡ ಎಂದರು.
ಮುಸ್ಲಿಮರು ಗೋಮಾಂಸ ತಿನ್ನುತ್ತಾರೆ. ಅಲ್ಲಾ ಒಬ್ಬನೇ ದೇವ್ರು, ಉಳಿದವರು ಕಾಫಿರರು ಎನ್ನುವವರು ಅಲ್ಲಿ ಪ್ರವೇಶ ಮಾಡುವುದು ಬೇಡ ಎಂದ ಮುತಾಲಿಕ್, ಅಲ್ಲಿ ಅವರು ಪ್ರವೇಶ ಮಾಡಿದರೆ ಅಪವಿತ್ರ ಆಗಲಿದೆ. ಅಶುದ್ಧ ಆಗಲಿದೆ ಎಂದು ಹೇಳಿದರು.
ನಾಗೇನಹಳ್ಳಿಯಲ್ಲಿರುವ ಬಾಬಾ ಬುಡನ್ ಗಿರಿಗೆ ಹೋಗಿ ಮುಸ್ಲಿಮರು ಪೂಜೆ ಮಾಡಲಿ. ಕೋರ್ಟ್ ಮೂಲಕ ಅದು ಆಗುವಂತೆ ಒತ್ತಾಯ ಮಾಡಬೇಕು. ಸರ್ಕಾರ ಅವರ ಜೊತೆ ಸಮಾಲೋಚನೆ ಮಾಡಿ ದಾಖಲೆ ತೋರಿಸಿ, ನಾಗೇನಹಳ್ಳಿಯಲ್ಲಿ ಪೂಜೆ ಮಾಡುವಂತೆ ಮಾಡಿ ಎಂದು ಮುತಾಲಿಕ್ ಹೇಳಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
02/07/2022 10:20 pm