ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಪ.ಪಂ ಸಾಮಾನ್ಯ ಸಭೆ : ಅಭಿವೃದ್ಧಿ ನಿಲುವು

ಕುಂದಗೋಳ : ಸರ್ಕಾರಿ ಇಲಾಖೆ ಅಧಿಕಾರಿಗಳು ಪಟ್ಟಣ ಪಂಚಾಯತಿಗೆ ಸಂಬಂಧವೇ ಇಲ್ಲಾ ಎನ್ನುವ ರೀತಿಯ ನಡುವಳಿಕೆ ತೋರುತ್ತಿದ್ದಾರೆ ಎಂದು ಪ.ಪಂ ಕಾಂಗ್ರೆಸ್ ಸದಸ್ಯರು ಆರೋಪಿಸಿದರು.

ವ್ಯವಸ್ಥೆ ಹೀಗಾದರೆ ಅಧಿಕಾರಿಗಳಿಗೆ ಸದಸ್ಯರು ಏಕೆ ? ಸಹಕಾರ ನೀಡಬೇಕು ಎಂದು ಪಟ್ಟಣ ಪಂಚಾಯತಿ ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಪಟ್ಟಣ ಪಂಚಾಯಿತಿ ಸಭಾ ಭವನದಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಹಲವು ಸದಸ್ಯರು ಲೋಕೋಪಯೋಗಿ, ಜಿಪಂ, ಇಂಜನಿಯರಿಂಗ್, ಉಪವಿಭಾಗ ಸಹಿತ ಹಲವು ಕಾಮಗಾರಿಗಳ ಅನುಷ್ಠಾನ ಸಮಯದಲ್ಲಿ ನಮ್ಮನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಇದು ಸರಿಯಲ್ಲ ಎಂದರು.

ಪಟ್ಟಣದಲ್ಲಿನ ಎಲ್ಲಾ ಮಾರ್ಗಗಳಿಗೆ ಆಯಾ ಸ್ಥಳ ಮತ್ತು ಪ್ರದೇಶಗಳಿಗೆ ಸಂಬಂಧಿಸಿದಂತೆ ಅದರಲ್ಲೂ ಪ್ರಮುಖವಾಗಿ ಹುಬ್ಬಳ್ಳಿ- ಲಕ್ಷ್ಮೇಶ್ವರ ರಸ್ತೆಯ ಶ್ರೀ ಗಾಳಿ ಮರೆಮ್ಮದೇವಿಯ ದೇವಸ್ಥಾನದ ಹತ್ತಿರ ಜಗಜ್ಯೋತಿ ಬಸವೇಶ್ವರ, ವೀರ ಸಂಗೊಳ್ಳಿ ರಾಯಣ್ಣ, ಛತ್ರಪತಿ ಶಿವಾಜಿ ಮಹಾರಾಜರು ಸಹಿತ ಹಲವು ಮಹಾತ್ಮರ ಪುತ್ಥಳಿ ಸ್ಥಾಪಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.

ಪಟ್ಟಣದ ಎಲ್ಲಾ ವೃತ್ತಗಳಿಗೆ ಮಹಾತ್ಮರು, ಸಾಧಕರು, ಶರಣರ ಹೆಸರಿಡುವ ಕುರಿತ ಪ್ರಸ್ತಾಪಕ್ಕೆ ಸಭೆಯ ಬಹುತೇಕ ಸಮಯವೇ ಮೀಸಲಿಡುವಂತಾಯಿತು.

ರೈಲ್ವೆ ಸೇತುವೆಯ ಮೂಲಕ ಕೋರ್ಟ್ ಕಟ್ಟಡದ ಬಳಿ ಬಂದು ಸೇರುವ ರಸ್ತೆಯೂ ನ್ಯಾಯಾಲಯಕ್ಕೆ ಸೇರಿದ್ದು, ಅಲ್ಪ ಸ್ಥಳವನ್ನು ಸಾರ್ವಜನಿಕರು ವಿವಿಧ ಗ್ರಾಮಗಳಿಗೆ ತೆರಳುವ ಪ್ರಯಾಣಿಕರಿಗೆ ಅನುಕೂಲಕ್ಕಾಗಿ ನಿಲುಗಡೆ ಸ್ಥಾಪಿಸಲು ಜಾಗ ಬಿಟ್ಟು ನೀಡುವ ಪ್ರಸ್ತಾವಣೆಯನ್ನು ಸ್ಥಳೀಯ ನ್ಯಾಯಾಲಯದ ಮೂಲಕ ಜಿಲ್ಲಾ ನ್ಯಾಯಾಧೀಶರ ಗಮನಕ್ಕೆ ತಂದು ಆ ಜಾಗ ಪಡೆಯುವ ಪ್ರಸ್ತಾವನೆಗೆ ಸಭೆ ಒಪ್ಪಿಗೆ ನೀಡಿತು.

Edited By : Nagesh Gaonkar
Kshetra Samachara

Kshetra Samachara

30/06/2022 08:20 pm

Cinque Terre

33.48 K

Cinque Terre

0

ಸಂಬಂಧಿತ ಸುದ್ದಿ