ಹುಬ್ಬಳ್ಳಿ: ಅವಳಿನಗರದ ಸ್ವಚ್ಛತೆಗೆ ಅವಶ್ಯಕತೆ ಇರುವ ಪೌರಕಾರ್ಮಿಕರ ನಿಯೋಜನೆ ಕುರಿತು ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ ಬೆನ್ನಲ್ಲೇ ಚುನಾಯಿತ ಪ್ರತಿನಿಧಿಗಳು ಅಧಿಕಾರಿಗಳ ಮೈಚಳಿ ಬಿಡಿಸಿದ್ದಾರೆ.
ಹೌದು. ಜನಸಂಖ್ಯೆ, ವಾರ್ಡ್ ಮರುವಿಂಗಡಣೆಯ ಆಧಾರದ ಮೇಲೆ ಪೌರಕಾರ್ಮಿಕರ ಹಂಚಿಕೆ ಕುರಿತು ಕಾಂಗ್ರೆಸ್ ಪಾಲಿಕೆ ಸದಸ್ಯ ಸಂದೀಲ ಕುಮಾರ್ ಅಧಿಕಾರಿಗಳಿಗೆ ಪ್ರಶ್ನಿಸಿದ್ದು, ಈ ಸಂದರ್ಭದಲ್ಲಿ ಅಧಿಕಾರಿಗಳು ಸೂಕ್ತ ಮಾಹಿತಿಯನ್ನು ನೀಡದೇ ತಪ್ಪು ಮಾಹಿತಿ ನೀಡಿದ ಬೆನ್ನಲ್ಲೇ ಎಲ್ಲ ಪಕ್ಷದ ಚುನಾಯಿತ ಪ್ರತಿನಿಧಿಗಳು ಅಧಿಕಾರಿಗಳನ್ನಯ ತರಾಟೆಗೆ ತೆಗೆದುಕೊಂಡರು.
ಇನ್ನೂ ಅಧಿಕಾರಿಗಳು ಹಳೆಯ 67 ವಾರ್ಡ್ ಮಾಹಿತಿಯನ್ನು ನೀಡುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ ಪಾಲಿಕೆ ಸದಸ್ಯರು ಕೂಡಲೇ ಇಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಗಳನ್ನು ಜರುಗಿಸಿಬೇಕು ಎಂದು ಮೇಯರ್ ಹಾಗೂ ಪಾಲಿಕೆ ಆಯುಕ್ತರಿಗೆ ವಾಗ್ದಾನ ಮಾಡಿದರು.
Kshetra Samachara
30/06/2022 02:46 pm