ನವಲಗುಂದ : ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಚುನಾವಣೆ ಹಿನ್ನೆಲೆ ಶಿಕ್ಷಕರು ಸಹ ನಾವೆಲ್ಲ ಸೇರಿ ಹೊಸ ಬದಲಾವಣೆ ಮಾಡೋಣ ಎಂದು ಭರವಸೆ ನೀಡಿದ್ದಾರೆ ಎಂದು ಪಟ್ಟಣದಲ್ಲಿ ಧಾರವಾಡ ಜಿಲ್ಲಾ ಗ್ರಾಮೀಣ ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ವಿನೋದ್ ಅಸೂಟಿ ಅವರು ಹೇಳಿದರು.
ನವಲಗುಂದ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇವತ್ತು ರಾಜ್ಯದ್ಯಂತ ಎಂಎಲ್ಸಿ ಚುನಾವಣೆ ನಡೆದಿದೆ. ಅದೇ ರೀತಿ ನಮ್ಮ ಧಾರವಾಡ ಜಿಲ್ಲೆ ಹಾವೇರಿ, ಗದಗ, ಉತ್ತರ ಕನ್ನಡ ಈ ಒಂದು ಜಿಲ್ಲೆ ಸಂಬಂಧಿಸಿದಂತೆ ನಮ್ಮ ಕಾಂಗ್ರೆಸ್ ನ ಬೆಂಬಲಿತ ಅಭ್ಯರ್ಥಿಯಾದ ಬಸವರಾಜ ಗುರಿಕಾರ ಅವರು ನಮ್ಮ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಕೂಡ ನಮ್ಮ ಎಲ್ಲಾ ನಾಯಕರು ಆಸಕ್ತಿ ಹಾಗೂ ಉತ್ಸಾಹದಿಂದ ಶಾಲಾ-ಕಾಲೇಜುಗಳಿಗೆ ತೆರಳಿ ಶಿಕ್ಷಕರಿಗೆ ನಮ್ಮ ಪಕ್ಷದ ಪರವಾಗಿ ಮತಯಾಚನೆ ಮಾಡಿದರು. ಶಿಕ್ಷಕರು ಸಹ ನಾವೆಲ್ಲ ಸೇರಿ ಹೊಸ ಬದಲಾವಣೆ ಮಾಡೋಣ ಎಂದು ಭರವಸೆ ನೀಡಿದ್ದಾರೆ ಎಂದರು.
Kshetra Samachara
13/06/2022 10:02 pm