ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಇದು ಪ್ರಜ್ಞಾವಂತ ಮತದಾರರಾದ ಶಿಕ್ಷಕರು ಮತ ಹಾಕುವಂತ ಕ್ಷೇತ್ರ; ಕೋನರಡ್ಡಿ

ನವಲಗುಂದ : ಇದು ಪ್ರಜ್ಞಾವಂತ ಮತದಾರರಾದ ಶಿಕ್ಷಕರು ಮತ ಹಾಕುವಂತ ಕ್ಷೇತ್ರ, ಅದಕ್ಕೆ ಇವತ್ತು ಕಾಂಗ್ರೆಸ್ ಪರವಾಗಿ ಗಾಳಿ ಬೀಸುತ್ತಿರುವುದರಿಂದ ಶೇ.50ಕ್ಕಿಂತ ಹೆಚ್ಚು ಜನ ನಮ್ಮ ಪರವಾಗಿ ಮತ ಹಾಕುವಂಥದ್ದು ನಮಗೆ ಕಂಡು ಬಂದಿದೆ ಎಂದು ನವಲಗುಂದ ಪಟ್ಟಣದಲ್ಲಿ ಮಾಜಿ ಶಾಸಕ ಎನ್ ಹೆಚ್ ಕೋನರೆಡ್ಡಿ ಅವರು ಹೇಳಿದರು.

ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕ ವಿಧಾನ ಪರಿಷತ್ ಚುನಾವಣೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಬಸವರಾಜ ಗುರಿಕಾರ ಅವರ ಪರವಾಗಿ ಕಾಂಗ್ರೆಸ್ ಪಕ್ಷದ ಬ್ಲಾಕ್ ಅಧ್ಯಕ್ಷರಾದ ವಿನೋದ ಅಸೂಟಿ, ಪುರಸಭೆ ಅಧ್ಯಕ್ಷರಾದ ಅಪ್ಪಣ್ಣ ಹಳ್ಳದ, ಅವರು ಸೇರಿದಂತೆ ಎಲ್ಲಾ ಗೌರವಾನ್ವಿತ ಸದಸ್ಯರು ಮುಖಂಡರು ಕೂಡ ಇವತ್ತು ಮತ ಹಾಕಿಸುವಂತಹ ಕೆಲಸವನ್ನು ಮಾಡುತ್ತಿದ್ದೇವೆ. ಇದು ಪ್ರಜ್ಞಾವಂತ ಮತದಾರರಾದ ಶಿಕ್ಷಕರು ಮತ ಹಾಕುವಂತ ಕ್ಷೇತ್ರ ಅದಕ್ಕೆ ಇವತ್ತು ಕಾಂಗ್ರೆಸ್ ಪರವಾಗಿ ಗಾಳಿ ಬೀಸುತ್ತಿರುವುದರಿಂದ ಶೇಕಡಾ 50ಕ್ಕಿಂತ ಹೆಚ್ಚು ಜನ ನಮ್ಮ ಪರವಾಗಿ ಮತ ಹಾಕುವಂಥದ್ದು ನಮಗೆ ಕಂಡುಬಂದಿದೆ ಎಂದರು.

ಆ ದಿಶೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ವಿಶ್ವಾಸದಲ್ಲಿ ನಾವಿದ್ದೇವೆ. ನಾಲ್ಕು ಜಿಲ್ಲೆಯಲ್ಲಿ ಈ ಬಾರಿ ಎಲ್ಲಾ ಕಾರ್ಯಕರ್ತ, ಸದಸ್ಯ, ಮುಖಂಡರು ಒಟ್ಟಾಗಿ ಸೇರಿ ಕೆಲಸ ಮಾಡಿದ್ದಾರೆ. ನಾವು ಅಡ್ವಾನ್ಸಾಗಿ ಟಿಕೆಟ್ ಬುಕ್ ಮಾಡಿದ್ದು, ಹೀಗಾಗಿ ಹೆಚ್ಚು ಕಾಲಾವಕಾಶ ಸಿಕ್ತು, ಅದಕ್ಕೆ ಎಲ್ಲ ಶಾಲೆಗಳಿಗೆ ಭೇಟಿ ಕೊಡುವಂತಹ ತೀರ್ಮಾನ ಮಾಡಿದ್ದಾರೆ. ಅದಕ್ಕೆ ಇವತ್ತು ಫೈಟ್ ಹಾಕ್ತಿರೋದು. ಪ್ರತಿ ಚುನಾವಣೆ ಈ ರೀತಿ ಇರ್ತಿರ್ಲಿಲ್ಲ. ಈ ಬಾರಿ ಚುನಾವಣೆ ವ್ಯವಸ್ಥೆ ಬೇರೆ ಇದೆ. ನಮ್ಮ ಅಭ್ಯರ್ಥಿ ಚೆನ್ನಾಗಿ ಕೆಲಸ ಮಾಡಿದ್ದಾರೆ ಅಂತ ಹೇಳಬಹುದು ಎಂದರು.

Edited By : PublicNext Desk
Kshetra Samachara

Kshetra Samachara

13/06/2022 09:52 pm

Cinque Terre

5.09 K

Cinque Terre

0

ಸಂಬಂಧಿತ ಸುದ್ದಿ