ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಬ್ಯಾನರ್‌ನಲ್ಲಿ ವಿನಯ ಕುಲಕರ್ಣಿ ಫೋಟೋ ಮರೆತ ಜಿಲ್ಲಾ ಕಾಂಗ್ರೆಸ್!

ಧಾರವಾಡ: ಧಾರವಾಡದಲ್ಲಿ ಬುಧವಾರ ನಡೆದ ಪಶ್ಚಿಮ ಶಿಕ್ಷಕರ ಕ್ಷೇತ್ರದ ಪ್ರಚಾರ ಸಭೆಯ ಬ್ಯಾನರ್‌ನಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಭಾವಚಿತ್ರ ಹಾಕುವುದನ್ನೇ ಜಿಲ್ಲಾ ಕಾಂಗ್ರೆಸ್ ಮರೆತಿದೆ.

ಈ ಪ್ರಚಾರ ಸಭೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದರು. ಕಾರ್ಯಕ್ರಮದ ಬ್ಯಾನರ್‌ನಲ್ಲಿ ಆರ್.ವಿ.ದೇಶಪಾಂಡೆ, ಸಲೀಂ ಅಹ್ಮದ್, ಸತೀಶ ಜಾರಕಿಹೊಳಿ, ಎಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್ ಅವರ ಭಾವಚಿತ್ರ ಹಾಕಲಾಗಿತ್ತು.

ಆದರೆ, ಧಾರವಾಡ ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಭಾವಚಿತ್ರವನ್ನೇ ಹಾಕಿರಲಿಲ್ಲ. ಹೀಗಾಗಿ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಇಮ್ರಾನ್ ಕಳ್ಳಿಮನಿ ಅವರು ಸಿದ್ದರಾಮಯ್ಯ ಹೊರಗಡೆ ಬರುತ್ತಿದ್ದಂತೆ ಜಿಲ್ಲಾ ಕಾಂಗ್ರೆಸ್‌ನಿಂದ ಆದ ಪ್ರಮಾದವನ್ನು ಅವರ ಗಮನಕ್ಕೆ ತಂದರು. ಶಿಷ್ಟಾಚಾರದ ಪ್ರಕಾರ ಬ್ಯಾನರ್‌ನಲ್ಲಿ ವಿನಯ್ ಅವರ ಭಾವಚಿತ್ರ ಹಾಕಬೇಕಿತ್ತು ಎಂದು ಸಿದ್ದರಾಮಯ್ಯ ಕೂಡ ಹೇಳಿದ ಪ್ರಸಂಗ ಜರುಗಿತು.

Edited By :
Kshetra Samachara

Kshetra Samachara

08/06/2022 08:14 pm

Cinque Terre

57.49 K

Cinque Terre

4

ಸಂಬಂಧಿತ ಸುದ್ದಿ