ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸೂಲಿಬೆಲೆ ವಿಚಾರಗಳನ್ನು ಪಠ್ಯದಲ್ಲಿ ಸೇರಿಸಿದ್ದರಲ್ಲಿ ತಪ್ಪೇನಿದೆ? ಮಾಜಿ ಸಿಎಂ ಶೆಟ್ಟರ್ ಪ್ರಶ್ನೆ

ಹುಬ್ಬಳ್ಳಿ: ಪಠ್ಯ ಪುಸ್ತಕದಲ್ಲಿ ಚಕ್ರವರ್ತಿ ಸೂಲಿಬೆಲೆ ಅವರ ವಿಚಾರಗಳನ್ನು ಸೇರಿಸಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.

ಹುಬ್ಬಳ್ಳಿಯಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಕ್ರವರ್ತಿ ಸೂಲಿಬೆಲೆ ಅವರು ತಮ್ಮ ವೈಯಕ್ತಿಕ ವಿಚಾರಗಳನ್ನು ಹೇಳುವುದಿಲ್ಲ. ಚಕ್ರವರ್ತಿ ಸೂಲಿಬೆಲೆ ಅವರ ಲೇಖನ, ಪುಸ್ತಕಗಳನ್ನು ಓದಿದ್ದೇನೆ. ಭಾಷಣಗಳನ್ನು ಹೇಳಿದ್ದೇನೆ. ಹಿಂದೂ ಸಮಾಜದ ಉದ್ದಾರಕ್ಕೆ, ಹಿಂದೂ ಸಮಾಜ ಸಂಘಟನೆ ಸಲುವಾಗಿ, ದೇಶದ ಸಂಸ್ಕೃತಿ ಪರಂಪರೆ ಉಳಿಸುವ ಸಲುವಾಗಿ ಅವರಷ್ಟು ಯಾರು ಲೇಖನಗಳನ್ನು ಬರೆದಿದ್ದು ನೋಡಿಲ್ಲ. ಆ ರೀತಿಯ ವಾಗ್ಮಿ ಅವರ ಲೇಖನಗಳನ್ನು ಪಠ್ಯಗಳಲ್ಲಿ ಸೇರಿಸುವುದರಿಂದ ಯಾವುದೇ ತೊಂದರೆ ಇಲ್ಲ. ಅದರಿಂದ ಇನ್ನೂ ಹೆಚ್ಚಿನ ಜ್ಞಾನ ಉಗಮವಾಗಲಿದೆ ಎಂದು ಹೇಳುವ ಮೂಲಕ ಪಠ್ಯದಲ್ಲಿ ಸೂಲಿಬೆಲೆ ವಿಚಾರಗಳನ್ನು ಸೇರಿಸುವುದನ್ನು ಸಮರ್ಥಿಸಿಕೊಂಡರು.

ಟಿಪ್ಪು ಸುಲ್ತಾನ್ ಇತಿಹಾಸವನ್ನು ಪಠ್ಯದಲ್ಲಿ ಕೈಬಿಟ್ಟಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಟಿಪ್ಪುವಿನ ಪಠ್ಯವನ್ನು ಕೈಬಿಡಲೇಬೇಕು. ಟಿಪ್ಪು ಒಬ್ಬ ನರಭಕ್ಷಕ. ಚಿತ್ರದುರ್ಗದಲ್ಲಿ ನಾಯಕ ಜನಾಂಗದವರನ್ನು, ಕೊಡಗಿನಲ್ಲಿ ಸಾಮಾನ್ಯ ನಾಗರಿಕರಿಗೆ ಕೇಳಿದರೇ ಸಾಕು ಟಿಪ್ಪುವಿನ ಆಡಳಿತದಲ್ಲಿ ಆತನ ಸಹಚರರು, ಬೆಂಬಲಿಗರು ಮತ್ತು ಆತ ಏನು ತೊಂದರೆ ಕೊಟ್ಟಿದ್ದಾನೆ. ಅತ್ಯಾಚಾರ ಮಾಡಿದ್ದಾನೆ ಎಂಬುದು ಎಲ್ಲವೂ ಹೊರಗಡೆ ಬರುತ್ತದೆ. ಅಂತವರನ್ನು ಇತಿಹಾಸದಲ್ಲಿ ಸೇರಿಸಿದ್ದು ತಪ್ಪು. ಟಿಪ್ಪು ವಿಷಯವನ್ನು ಪಠ್ಯದಿಂದ ಕೈಬಿಡುವುದರಿಂದ ತಪ್ಪಿಲ್ಲ ಎಂದರು. ವಿಧಾನ ಪರಿಷತ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಚಾರವಾಗಿ ಮಾತನಾಡಿದ ಅವರು, ಇವತ್ತು ಅಥವಾ ನಾಳೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ ಎಂದರು.

ಸಚಿವ ಸಂಪುಟದಲ್ಲಿ ತಮಗೆ ಸ್ಥಾನ ಸಿಗಲಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನಿಮಗೆ ಯಾರು ಹೇಳಿದರು. ನಾನೇ ಎಲ್ಲವನ್ನೂ ಬಿಟ್ಟು ಕುಳಿತಿದ್ದೇನೆ. ನನಗೆ ಯಾಕೆ ಗಂಟು ಬೀಳುತ್ತೀರಿ? ಎಂದು ಶೆಟ್ಟರ್ ಮರುಪ್ರಶ್ನೆ ಹಾಕಿದರು.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

22/05/2022 02:12 pm

Cinque Terre

162.52 K

Cinque Terre

36

ಸಂಬಂಧಿತ ಸುದ್ದಿ