ಹುಬ್ಬಳ್ಳಿ: ಅವರೆಲ್ಲರೂ ಇಷ್ಟು ದಿನಗಳ ಕಾಲ ಮಠ ಮಾನ್ಯಗಳನ್ನು ಮುನ್ನೆಡಿಸುತ್ತಿದ್ದ ಸ್ವಾಮೀಜಿಗಳು. ಈಗ ಸಾಮಾಜಿಕ ಸೇವೆ ಹೆಸರಲ್ಲಿ ರಾಜಕೀಯ ರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಬಹುದೊಡ್ಡ ಚಳುವಳಿಯ ಮೂಲಕ ಈಗ ರಾಜಕೀಯಕ್ಕೆಎಂಟ್ರಿ ಕೊಡುವ ಚಿಂತನೆಯಲ್ಲಿದ್ದಾರೆ.
ಹೌದು.. ಹುಬ್ಬಳ್ಳಿಯಲ್ಲಿ ತಿಪಟೂರು ರುದ್ರಮುನಿ ಹಾಗೂ ಚಳಗೇರಿ ವೀರಸಂಗಮೇಶ್ವರ ಸ್ವಾಮೀಜಿಗಳ ನೇತೃತ್ವದಲ್ಲಿ ಸುಮಾರು ಐವತ್ತಕ್ಕೂ ಹೆಚ್ಚಿನ ಮಠಾಧೀಶರು ಆಗಮಿಸಿ ಬೇಡ ಜಂಗಮ ಚಳವಳಿಯ ಹೋರಾಟವನ್ನು ಮತ್ತೆ ಆರಂಭಿಸಲು ಮುಂದಾಗಿದ್ದಾರೆ ಆ ಮೂಲಕ ರಾಜಕೀಯ ರಂಗ ಪ್ರವೇಶಕ್ಕೆ ನಿರ್ಧಾರ ಮಾಡಿದ್ದಾರೆ.
ನಮ್ಮ ಬೇಡಿಕೆಗಳಿಗೆ ನಾವೇ ಮಾರ್ಗವನ್ನು ಕಂಡುಕೊಳ್ಳಬೇಕು ಎನ್ನುವ ನಿರ್ಧಾರ ಮಾಡಿರುವ ಕಾವಿಧಾರಿಗಳು ರಾಜಕೀಯ ರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಲು ಮುಂದಾಗಿದ್ದಾರೆ.
ಇನ್ನೂ ರಾಜ್ಯದಲ್ಲಿ ಬೇಡ ಜಂಗಮ ಸರ್ಟಿಫಿಕೇಟ್ ತೆಗೆದುಕೊಂಡವರ ಮೇಲೆ ಹಲ್ಲೆ ಆಗುತ್ತಿದೆ. ನಾವು ಯಾವುದೇ ಒಂದು ವ್ಯವಸ್ಥೆ, ಜಾತಿ ವಿರುದ್ಧ ಹೋರಾಟ ಮಾಡುತ್ತಿಲ್ಲ. ಇವತ್ತಿನಿಂದ ನಮ್ಮ ಚಳುವಳಿ ಆರಂಭವಾಗಿದೆ.
ನಮ್ಮ ಹೋರಾಟ ಹಿಂಸಾತ್ಮಕ ಮತ್ತು ಪ್ರಚೋದನಕಾರಿಯಾಗಿ ಇರುವುದಿಲ್ಲ. ಎಲ್ಲರೂ ಮತ್ತೊಮ್ಮೆ ಸಭೆ ಸೇರಿ ಸಿಎಂ ಅವರನ್ನ ಭೇಟಿ ಮಾಡುವುದರ ಬಗ್ಗೆ ಚಿಂತನೆ ಮಾಡುತ್ತೆವೆ. ನಾವು ಪ್ರತ್ಯೇಕ ಮೀಸಲಾತಿ ಕೇಳುವುದಿಲ್ಲ, ನಮಗೆ ಬೇಡ ಜಂಗಮ ಸರ್ಟಿಫಿಕೇಟ್ ಬೇಕು. ಇದಕ್ಕೆ ತಾರ್ಕಿಕ ಅಂತ್ಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ.
ರಾಜ್ಯದಲ್ಲಿ 40 ಲಕ್ಷ ಜನ ಬೇಡ ಜಂಗಮ ಸಮುದಾಯದವರಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಕೂಡ ಮುಂಬರುವ ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿಯುವುದು ಖಂಡಿತ ಎನ್ನುತ್ತಾರೆ ಸ್ವಾಮೀಜಿಗಳು.
ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
19/05/2022 07:51 am